ತುಪ್ಪದ ದೀಪದಾರತಿಯೊಂದಿಗೆ ಮಹಾ ಮಂಗಳಾರತಿ, ವಿಶೇಷ ತಂಬಿಲ, ಮಹಾಪೂಜೆ

ಪುತ್ತೂರು: ಭಕ್ತಿಯಿಂದ ನಂಬಿದ ಭಕ್ತರನ್ನು ಸಲಹುತ್ತಾ ಬಂದಿರುವ ತಾಲೂಕಿನ ಅತ್ಯಂತ ಕಾರಣಿಕ ಕ್ಷೇತ್ರವಾಗಿರುವ ಆರ್ಯಾಪು ಗ್ರಾಮದ ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ 2024 ಸೆ.12 ರಂದು ನಡೆದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಹೋತ್ಸವ ದಿನದ ಅಂಗವಾಗಿ ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಶ್ರೀ ದೈವಗಳಿಗೆ ವಿಶೇಷ ಪ್ರಾರ್ಥನೆ, ತಂಬಿಲ ಸೇವೆ, ಮಹಾಪೂಜೆ, ತುಪ್ಪದ ದೀಪದಾರತಿಯೊಂದಿಗೆ ಮಹಾಮಂಗಳಾರತಿ, ಕೂರೇಲು ತರವಾಡು ಮನೆಯ ಧರ್ಮದೈವಗಳಿಗೆ ತುಪ್ಪದ ದೀಪದಾರತಿಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮ ಸೆ.12 ರಂದು ಬೆಳಿಗ್ಗೆ ಗಂಟೆ 6.30 ಕ್ಕೆ ನಡೆಯಿತು.

ಆರಂಭದಲ್ಲಿ ಶ್ರೀ ಮಲರಾಯ ದೈವಸ್ಥಾನದಲ್ಲಿ ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆದು ತುಪ್ಪದ ದೀಪದಾರತಿಯೊಂದಿಗೆ ಮಹಾಮಂಗಳಾರತಿ, ಮಹಾಪೂಜೆ ನಡೆಯಿತು ಬಳಿಕ ಕೂರೇಲು ತರವಾಡು ಮನೆಯ ಧರ್ಮದೈವಗಳಿಗೆ ವಿಶೇಷ ಪೂಜೆ ನಡೆದು ದೀಪದಾರತಿಯೊಂದಿಗೆ ಮಹಾಮಂಗಳಾರತಿ ನಡೆಯಿತು.

ಶ್ರೀ ಕ್ಷೇತ್ರ ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸರಸ್ವತಿ ಸಂಜೀವ ಪೂಜಾರಿ, ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು ಸೇರಿದಂತೆ ಕೂರೇಲು ತರವಾಡು ಮನೆಯ ಕುಟುಂಬಸ್ಥರು, ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.