ರೂ.5.69 ಲಕ್ಷ ನಿವ್ವಳ ಲಾಭ, ಶೇ.20 ಡೆವಿಡೆಂಡ್, ಲೀಟರ್ ಹಾಲಿಗೆ ರೂ. 2.26 ಬೋನಸ್ ಘೋಷಣೆ
ನಿಡ್ಪಳ್ಳಿ; ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್. ಕೆ ಇವರ ಅಧ್ಯಕ್ಷತೆಯಲ್ಲಿ ಸೆ.12 ರಂದು ಸಂಘದ ರಜತಾಮೃತ ಸಭಾ ಭವನದಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘ ಎ ಶ್ರೇಣಿ ಪಡೆದಿದ್ದು ರೂ.5,69,680.71 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.20 ಡೆವಿಡೆಂಡ್ ಹಾಗೂ ಜಿಲ್ಲಾ ಮಟ್ಟದಲ್ಲಿಯೇ ಅತೀ ಹೆಚ್ಚು ಅಂದರೆ ಪ್ರತಿ ಲೀಟರ್ ಹಾಲಿಗೆ ರೂ.2.26 ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು.ಅತೀ ಹೆಚ್ಚು ಹಾಲು ಹಾಕಿದ ಮೂವರನ್ನು ಅಭಿನಂದಿಸಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ, ಸಂಘದ ಉಪಾಧ್ಯಕ್ಷ ಉಮೇಶ್ ಬಲ್ಯಾಯ.ಕೆ, ಉದಯ ಕುಮಾರ್ ರೈ.ಕೆ, ವಿಶ್ವನಾಥ ರೈ.ಯಸ್, ವೆಂಕಟಕೃಷ್ಣ.ಬಿ, ಶ್ರೀಧರ ಭಟ್ ಎಸ್.ವಿ, ಯತೀಶ್ ಕುಮಾರ ರೈ ಪಿ,ಸಂತೋಷ ಕುಮಾರ್ ಜಿ,ಗುಲಾಬಿ ರೈ.ಬಿ, ಸೀತಾ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುಲಾಬಿ ರೈ ಪ್ರಾರ್ಥಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಎ ಸ್ವಾಗತಿಸಿ, ಉಪಾಧ್ಯಕ್ಷ ಉಮೇಶ್ ಬಲ್ಯಾಯ ವಂದಿಸಿದರು. ಸಿಬ್ಬಂದಿಗಳಾದ ಹರೀಶ್ ಬಲ್ಯಾಯ ಕೆ, ಶಾರದ, ಸ್ವಸ್ತಿಕ್ ಶ್ರೀ ರಾಮ್ ಸಹಕರಿಸಿದರು. ಸಂಘದ ಸದಸ್ಯರು ಪಾಲ್ಗೊಂಡರು.