ರೋಟರಿ ಪುತ್ತೂರು ಸ್ವರ್ಣದಿಂದ ಶಿಕ್ಷಕರ ದಿನಾಚರಣೆ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಸೆ.11 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಕ್ಲಬ್  ಅಧ್ಯಕ್ಷರಾದ ಸುಭಾಷ್ ರೈ ಬೆಳ್ಳಿಪ್ಪಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ.ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಮಯ ಪರಿಪಾಲನೆಯನ್ನು ಮಾಡುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಹಾಗೂ ನುಡಿದಂತೆ ನಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಬಲ್ಯ ಇವರು ಶಿಕ್ಷಕರ ಜವಾಬ್ದಾರಿಗಳು ಈ ಕುರಿತಾಗಿ ವಿಚಾರ ಮಂಡನೆಯನ್ನು ಮಾಡಿದರು. ಮಕ್ಕಳ ಮನಸ್ಸಿನ ಭಾವನೆಯನ್ನು ಅರ್ಥೈಸಿಕೊಂಡು ಕಲಿಕೆಯ ವಾತಾವರಣವನ್ನು ಸೃಷ್ಟಿಸಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವ ಅವಶ್ಯಕತೆಯಿದೆಯೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಸುರೇಶ್ ಪಿ‌.ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಭಾಶ್ ರೈ ಬೆಳ್ಳಿಪ್ಪಾಡಿ ಇವರು ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು. ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ಸ್ಥಾಪಕಾಧ್ಯಕ್ಷ ಮಹಾಬಲ ಗೌಡ ಸ್ವಾಗತಿಸಿದರು. ಸನ್ಮಾನಿತ ಶಿಕ್ಷಕಿ ಪರಿಚಯವನ್ನು ಪೂರ್ವಾಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಉಮೇಶ್ ಮನವೇಲುರವರು ನಿರ್ವಹಿಸಿದರು. ಪೂರ್ವಾಧ್ಯಕ್ಷ ಭಾಸ್ಕರ  ಕೋಡಿಂಬಾಳ ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ, ಪೂರ್ವ ಸಹಾಯಕ ಗವರ್ನರ್ ಸಂತೋಷ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಸದಸ್ಯರಾದ ಜೋನ್ ಕುಟಿನ್ಹಾ, ಡೆನ್ನಿಸ್ ಮಸ್ಕರೇನಸ್, ಶ್ಯಾಮಲಾ ಉಪ್ಪಳಿಗೆ, ಸುಳ್ಯ ರೋಟರಿ ಕಾಲೇಜು ಪ್ರಾಂಶುಪಾಲೆ ದಯಾಮಣಿ, ಕಬಕ ಶಾಲೆ ಮುಖ್ಯ ಗುರು ಬಾಬು ಟಿ, ಹಾರಾಡಿ ಸರಕಾರಿ ಹಿ.ಪ್ರಾ ಶಾಲೆಯ ಶುಭಲತಾ, ಕೈಕಾ ಸ.ಹಿ.ಪ್ರಾ ಶಾಲೆಯ ಶೋಭಾ, ಪರ್ಲಡ್ಕ ಸ.ಹಿ.ಪ್ರಾ ಶಾಲೆಯ ವತ್ಸಲ, ಬಡಕೋಡಿ ಸ.ಹಿ.ಪ್ರಾ ಶಾಲೆಯ ಶೋಭಾ, ನಿವೃತ್ತ ಶಿಕ್ಷಕ ಪದ್ಮನಾಭ ಶೆಟ್ಟಿ, ರೋಟರಿ ಕ್ಲಬ್ ಸೆಂಟ್ರಲ್ ಪೂರ್ವಧ್ಯಕ್ಷ ರಫೀಕ್ ಪುತ್ತೂರು ಸಹಿತ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ರೋಟರಿ ಕುಟುಂಬಸ್ಥರು ಹಾಜರಿದ್ದರು. ರೋಟರಿ ಸ್ವರ್ಣ ಸದಸ್ಯ,  ಕೈಕಾರ ಸರಕಾರಿ ಹಿ.ಪ್ರಾ ಶಾಲೆಯ ಮುಖ್ಯ ಗುರು ರಾಮಣ್ಣ ರೈ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಮಸ್ತ ಶಿಕ್ಷಕರ ಪರವಾಗಿ ಪೇರಲ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಯಶೋಧ ಪುತ್ತೂರು ಇವರನ್ನು ದಂಪತಿ ಸಹಿತವಾಗಿ ಸನ್ಮಾನಿಸಲಾಯಿತು. ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಪುತ್ತೂರಿನ ವಿವಿಧ ರೋಟರಿ ಕ್ಲಬ್‌ಗಳ ಶಿಕ್ಷಕರನ್ನು ಹಾಗೂ ಕಾರ‍್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here