ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.23 ರಂದು ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪೂಜಾ ಸಮಿತಿ ವತಿಯಿಂದ ನಡೆಯಲಿರುವ ಸಾಮೂಹಿಕ ದುರ್ಗಾ ಪೂಜೆಯ ಅಂಗವಾಗಿ ಪೂರ್ವಭಾವಿ ಸಭೆಯು ಸೆ.13 ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ಹಾಗೂ ದುರ್ಗಾಪೂಜಾ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ರೈ, ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನ, ಶಿವಕುಮಾರ್ ಬಲ್ಲಾಳ್, ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಜತ್ತಪ್ಪ ಗೌಡ ಬಳ್ಳಿತ್ತಡ್ಡ, ಜೊತೆ ಕಾರ್ಯದರ್ಶಿ ಸನತ್ ಕುಮಾರ್ ರೈ ತೋಟದಮೂಲೆ, ಸದಸ್ಯರಾದ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ, ಜಗನ್ನಾಥ ರೈ ಕೊಮ್ಮಂಡ, ಸತೀಶ್ ರೈ ಮೂರ್ಕಾಜೆ, ಸತೀಶ್ ಗೌಡ ಪಾರ, ಸಂದೀಪ್ ರೈ ಬಾಜುವಳ್ಳಿ, ಕಿಶೋರ್ ಶೆಟ್ಟಿ ಕೋರ್ಮಂಡ, ಶಿವಪ್ರಸಾದ್ ತಲೆಪ್ಪಾಡಿ, ರಾಧಾಕೃಷ್ಣ ಆರ್. ಕೋಡಿ, ಸುಜಿತ್ ಕಜೆ, ನವೀನ್ ಕುಮಾರ್ ಗೋಕುಲ್, ಉಮೇಶ್ ಮಿತ್ತಡ್ಕ, ಶಶಿಕುಮಾರ್ ಕಟೀಲ್ತಡ್ಕ, ವಾಸು ಗೌಡ ಪಾರ, ರಾಧಾಕೃಷ್ಣ ಬಳ್ಳಿತ್ತಡ್ಡ, ಸಂತೋಷ್ ಬೇರಿಕೆ ಮತ್ತಿತರರು ಉಪಸ್ಥಿತರಿದ್ದರು.