ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಮಹಾಸಭೆ-ಆರೋಗ್ಯಭಾಗ್ಯ ಯೋಜನೆಗೆ ಚಾಲನೆ, ಸಾಧಕರಿಗೆ ಸನ್ಮಾನ

0

ಸಹಕಾರ ಸಂಘಗಳಿಂದ ಉತ್ತಮ ಕಾರ್ಯನಿರ್ವಹಣೆ: ಬಿ.ರಮಾನಾಥ ರೈ
ಲಾಭದಲ್ಲಿ ಮುನ್ನಡೆಯುತ್ತಿರುವ ಸಹಕಾರ ಸಂಘಗಳು; ಹರೀಶ್‌ಕುಮಾರ್
ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಬೇಕು: ಪದ್ಮರಾಜ್ ಆರ್.ಪೂಜಾರಿ
ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಬದುಕು ಸದೃಢ; ಸುಧೀರ್‌ಕುಮಾರ್
ಜಿಲ್ಲೆಯಲ್ಲಿ ಸಹಕಾರ ಸಂಘಗಳಿಂದ ಉತ್ತಮ ಸೇವೆ; ಸಂಜೀವ ಪೂಜಾರಿ
ಹೆಡ್, ಬ್ಲಡ್, ದುಡ್ಡು ನಿರಂತರವಾಗಿ ಖರ್ಚು ಆಗಬೇಕು; ಪ್ರವೀಣ್‌ಕುಮಾರ್
ವರ್ಷದಲ್ಲಿ 1ಸಲವಾದರೂ ರಕ್ತದಾನ ಮಾಡಬೇಕು; ಉಷಾ ಅಂಚನ್

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಕಾಮಧೇನು ಆರೋಗ್ಯ ಭಾಗ್ಯ ಯೋಜನೆಯಡಿ ರಕ್ತದಾನ ಶಿಬಿರ ಸೆ.13ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.

ಸಹಕಾರ ಸಂಘಗಳಿಂದ ಉತ್ತಮ ಕಾರ್ಯನಿರ್ವಹಣೆ-ಬಿ.ರಮಾನಾಥ ರೈ;
ಮಹಾಸಭೆ ಬಳಿಕ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಪೋಟಿಯ ನಡುವೆಯೂ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಮಧೇನು ಮಹಿಳಾ ಸಹಕಾರ ಸಂಘವೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ನಾನೂ ಸಹ ಬಂಟ್ವಾಳ ತಾಲೂಕು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷನಾಗಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕಡಬ ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಕಡಬ ತಾಲೂಕು ರಚನೆಯಾಗುವ ಮೊದಲೇ ಕಡಬಕ್ಕೆ ವಿಶೇಷ ತಹಶೀಲ್ದಾರ್ ನೇಮಕ ಆಗಿತ್ತು. ಈಗ ಪೂರ್ಣ ಪ್ರಮಾಣದ ತಾಲೂಕು ಆಗಿದ್ದರೂ ಅನೇಕ ಕೆಲಸ ಆಗಬೇಕಿದೆ. ಮುಂದೆ ಜಿಲ್ಲೆಯ ಪ್ರಮುಖ ತಾಲೂಕು ಆಗಿ ಕಡಬ ಬೆಳೆಯಲಿದೆ ಎಂದು ಹೇಳಿದರು.

ಲಾಭದಲ್ಲಿ ಮುನ್ನಡೆಯುತ್ತಿರುವ ಸಹಕಾರ ಸಂಘಗಳು-ಹರೀಶ್‌ಕುಮಾರ್;
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸದಸ್ಯರಾದ ಹರೀಶ್‌ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಕಾಮಧೇನು ಮಹಿಳಾ ಸಹಕಾರ ಸಂಘವೊಂದು ಮೂರು ವರ್ಷದಲ್ಲೇ ಲಾಭಗಳಿಸಿ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಣೆ ಮಾಡಿರುವುದು ಉತ್ತಮ ಸಾಧನೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಅನೇಕ ಸಹಕಾರಿ ಸಂಘಗಳಿದ್ದು ಲಾಭದಲ್ಲಿ ಮುನ್ನಡೆಯುತ್ತಿವೆ. ಆಡಳಿತ ಮಂಡಳಿ, ಗ್ರಾಹಕರ ನಡುವೆ ನಿಕಟಸಂಪರ್ಕ, ಪರಸ್ಪರ ವಿಶ್ವಾಸವಿದ್ದಲ್ಲಿ ಸಂಘ ಬೆಳೆಯಲಿದೆ ಎಂದರು.

ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಬೇಕು-ಪದ್ಮರಾಜ್ ಆರ್.ಪೂಜಾರಿ;
ಗೃಹಲಕ್ಷ್ಮೀ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್.ಪೂಜಾರಿ ಮಾತನಾಡಿ, ಮಹಿಳೆಯರೂ ಸ್ವಾವಲಂಬಿಗಳಾಗಬೇಕೆಂಬ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆಯಂತೆ ಉಷಾ ಅಂಚನ್ ಅವರು ಕಾಮಧೇನು ಮಹಿಳಾ ಸಹಕಾರಿ ಸಂಘ ಆರಂಭಿಸಿ ಇತರರಿಗೆ ಪ್ರೇರಣೆಯಾಗಿದ್ದಾರೆ. ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಕಾರ್ಯ ಮಾಡಬೇಕೆಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಬದುಕು ಸದೃಢ-ಸುಧೀರ್‌ಕುಮಾರ್;
ಅತಿಥಿಯಾಗಿದ್ದ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಅನೇಕ ಕುಟುಂಬಗಳ ಬದುಕು ಸದೃಢಗೊಂಡಿದೆ. ಉಷಾ ಅಂಚನ್ ಅವರ ನೇತೃತ್ವದ ತಂಡ ಕಾಮಧೇನು ಮಹಿಳಾ ಸಹಕಾರ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಸಹಕಾರ ಸಂಘಗಳಿಂದ ಉತ್ತಮ ಸೇವೆ-ಸಂಜೀವ ಪೂಜಾರಿ;
ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಅವರು ಮಾತನಾಡಿ, ಮೂರು ವರ್ಷದ ಹಿಂದೆ ಆರಂಭಗೊಂಡಿರುವ ಕಾಮಧೇನು ಮಹಿಳಾ ಸಹಕಾರ ಸಂಘ ಉತ್ತಮ ವ್ಯವಹಾರ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದಕ್ಕೆ ಸಂಘದ ಆಡಳಿತ ಮಂಡಳಿಯ, ಸಿಬ್ಬಂದಿಗಳ ಪ್ರಯತ್ನ ಕಾರಣವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಸಹಕಾರ ಸಂಘಗಳೂ ಜನರಿಗೆ ಉತ್ತಮ ಸೇವೆ ನೀಡುತ್ತಿವೆ ಎಂದರು.

ಹೆಡ್, ಬ್ಲಡ್, ದುಡ್ಡು ನಿರಂತರವಾಗಿ ಖರ್ಚು ಆಗಬೇಕು-ಪ್ರವೀಣ್‌ಕುಮಾರ್;
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್‌ಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ಶೇ.೯೦ರಷ್ಟು ರೋಗ ತಡೆಯಬಹುದು. ಇಲ್ಲಿ ಸಂಗ್ರಹಿಸಿದ ರಕ್ತವನ್ನು ಲೇಡಿಗೋಷನ್ ಆಸ್ಪತ್ರೆ ಮೂಲಕ ಅವಶ್ಯಕತೆ ಇರುವವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಹೆಡ್, ಬ್ಲಡ್, ದುಡ್ಡು ನಿರಂತರವಾಗಿ ಖರ್ಚು ಆಗುತ್ತಿರಬೇಕು. ಜಾತಿ, ಮತ ಭೇದವಿಲ್ಲದೆ ಕಾರ್ಯಾಚರಿಸುತ್ತಿರುವ ರಕ್ತದಾನ ಶಿಬಿರಕ್ಕೆ ಸಹಕಾರ ನೀಡಬೇಕೆಂದು ಹೇಳಿದರು.

ವರ್ಷದಲ್ಲಿ 1 ಸಲವಾದರೂ ರಕ್ತದಾನ ಮಾಡಬೇಕು-ಉಷಾ ಅಂಚನ್;
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ವರ್ಷಗಳ ಹಿಂದೆ ಆರಂಭಗೊಂಡ ಕಾಮಧೇನು ಮಹಿಳಾ ಸಹಕಾರ ಸಂಘವೂ ಸದಸ್ಯರ ಸಹಕಾರದಿಂದ ಪ್ರಗತಿಯತ್ತ ಸಾಗುತ್ತಿದೆ. ಈ ವರ್ಷ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆ ವರ್ಷದಲ್ಲಿ ೧ ಸಲವಾದರೂ ರಕ್ತದಾನ ಮಾಡಬೇಕೆಂಬ ಉದ್ದೇಶದಿಂದ ಕಾಮಧೇನು ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಸನ್ಮಾನ:
ಕೃಷಿ ಕ್ಷೇತ್ರದ ಸಾಧನೆಗಾಗಿ ವಿಜಯಕುಮಾರ್ ಸೊರಕೆ, ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ, ಸ್ಯಾಕ್ಸೋಫೋನ್ ವಾದಕಿ ಸಾಯಿಧೃತಿ ಶೆಟ್ಟಿ, ಯೋಗಪಟು ಆರಾಧ್ಯ ಶೆಟ್ಟಿ, ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಪದ್ಮರಾಜ ಆರ್.ಪೂಜಾರಿ, ಮಾಜಿ ಎಂಎಲ್‌ಸಿ ಹರೀಶ್‌ಕುಮಾರ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್‌ಕುಮಾರ್, ಎಸಿಎಫ್ ಮಧುಸೂದನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘಕ್ಕೆ ಸಹಕಾರ ನೀಡಿದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷ ಜನಾರ್ದನ ಕದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ಎ.ಜೆ., ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಹಿಂದೆ ಸಂಘದಲ್ಲಿ ಅಟೆಂಡರ್ ಆಗಿದ್ದ ಮೋಹನ, ಸಂಘದಿಂದ ಸಾಲ ಪಡೆದು ಯಶಸ್ವಿ ಉದ್ದಿಮೆ ನಡೆಸುತ್ತಿರುವ ರಕ್ಷಿತಾ, ಮಮತಾ, ಸುನೀತಾ, ವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಭಜನಾ ಸೇವೆ ನೀಡಿದ ಲಿಖಿತ್, ಶ್ರೀಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ;
ಕಲಿಕೆಯಲ್ಲಿ ಸಾಧನೆ ಮಾಡಿದ ಪಾವನ ಜೆ.ಪಿ., ಶ್ರೇಯಸ್, ಸಿಜಿ ಎಂ.ಎಸ್., ಶೋಭಿತ್ ಕೆ., ಲಿಖಿತಾ ಎಚ್.ಎ., ಜಿತೇಶ್ ಎಸ್., ಕಿರಣ್ ಕೆ., ಶ್ರೇಯ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಉತ್ತಮ ಗ್ರಾಹಕರಿಗೆ ಗೌರವಾರ್ಪಣೆ;
ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡಿದ ಸದಸ್ಯರಾದ ಅಮೀದಾ, ಅಶೋಕಾ, ಆನ್ಸಿ, ನೊಣಯ್ಯ ಶೆಟ್ಟಿ, ಸುದರ್ಶನ್, ಶಿವಾನಂದ ಎಸ್., ಕುಶಾಲಪ್ಪ ಗೌಡ, ಲಿಸ್ಸಿ ಅಬ್ರಹಾಂ, ಗಿರಿಜಾ, ಮೊಹಮ್ಮದ್ ಬಿ.ಎಚ್., ಲೀಲಾವತಿ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ಸ್ವಸಹಾಯ ಸಂಘಗಳನ್ನು ಗುರುತಿಸಲಾಯಿತು. ಬಡ ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಸೀರೆ ವಿತರಣೆ ಮಾಡಲಾಯಿತು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಚಾಪೆ ವಿತರಣೆ ಮಾಡಲಾಯಿತು. ಉತ್ತಮ ಸೇವೆ ಮಾಡಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಕಾಂಗ್ರೆಸ್ ಹಿರಿಯ ಮುಖಂಡ ಜಿ.ಕೃಷ್ಣಪ್ಪ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಅಪ್ಪಿ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಮಧುಸೂದನ್, ರವಿಚಂದ್ರ ಪಡುಬೆಟ್ಟು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ, ಬಂಟ್ವಾಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೈತನ್ಯ ವಂದಿಸಿದರು. ಸುಧೀರ್‌ಕುಮಾರ್ ಶೆಟ್ಟಿ, ಸುಪ್ರಿತಾ ಚರಣ್ ನಿರೂಪಿಸಿದರು. ಸಿಬ್ಬಂದಿ ದಿವ್ಯ ಪಿ.ಪ್ರಾರ್ಥಿಸಿದರು.

ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ.ನಾರಾಯಣ ರೆಂಜ, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಇಚ್ಲಂಪಾಡಿ, ಗೌರಿಶಂಕರ, ತಾ.ಪಂ.ಮಾಜಿ ಸದಸ್ಯೆ ಆಶಾಲಕ್ಷ್ಮಣ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಪ್ರಿತಾರವಿಚಂದ್ರ, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾಜಬೀನ್, ಉಪಾಧ್ಯಕ್ಷೆ ನೀಲಾವತಿಶಿವರಾಮ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್‌ಕುಮಾರ್, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಗೋಳಿತ್ತೊಟ್ಟು ಶಾಲಾ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ., ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಆನಂದ ಗೌಡ ಪಿಲವೂರು, ಪ್ರಮುಖರಾದ ವೇದಾವತಿ ಮುಕ್ವೆ, ಮೋಹನ್‌ಕುಮಾರ್ ದೋಂತಿಲ, ಜನಾರ್ದನ ಬಾಣಜಾಲು, ಶಶಿಕಲಾ ಮಂಗಳೂರು, ಪೂವಪ್ಪ ಕರ್ಕೇರ ಗೋಳಿತ್ತೊಟ್ಟು, ರತ್ನಾಕರ ಬಂಟ್ರಿಯಾಲ್, ಸಂತೋಷ್ ಬಿರ್ವಾ ನೆಲ್ಯಾಡಿ, ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಸಹಿತ ಹಲವು ಗಣ್ಯರು, ಸಂಘದ ಸದಸ್ಯೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಮೇಘನಾ ಶೈನ್, ನಿರ್ದೇಶಕರಾದ ರತಿ ಡಿ., ವಾರಿಜಾಕ್ಷಿ, ಶಾಲಿನಿಶೇಖರ ಪೂಜಾರಿ, ಸಂಪಾವತಿ ಕೊಲ್ಯೊಟ್ಟು, ವಿನೀತಾ ಎಂ.ಬಿ., ಪ್ರವೀಣಿ ಶೆಟ್ಟಿ, ಜಯಂತಿ, ಶ್ರೀಲತಾ ಮಾದೇರಿ, ಡೈಸಿ ವರ್ಗೀಸ್, ಮೈತ್ರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ, ಎಕೌಂಟೆಂಟ್ ಶುಭಲಕ್ಷ್ಮೀ ಕೆ., ಸಿಬ್ಬಂದಿಗಳಾದ ರಶ್ಮಿತಾ ಬಿ.ಆರ್., ಶ್ವೇತಾ, ಹರಿಣಾಕ್ಷಿ, ಅಕ್ಷತಾ, ಸೇವಾಪ್ರತಿನಿಧಿಗಳಾದ ದಿವ್ಯ ಪಿ., ಕುಸುಮಾವತಿ, ಪಿಗ್ಮಿ ಸಂಗ್ರಾಹಕರಾದ ಸವಿತಾ, ಪ್ರಹ್ಲಾದ್ ಶೆಟ್ಟಿ, ಗಣೇಶ, ಹೇಮಚಂದ್ರ, ಮಾರ್ಟ್ ಮಳಿಗೆ ಸಿಬ್ಬಂದಿ ಶ್ರೀಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾಯಿಧೃತಿ ಶೆಟ್ಟಿ ಅವರಿಂದ ಸ್ಯಾಕ್ಸೋಫೋನ್ ವಾದನ, ಆರಾಧ್ಯ ಶೆಟ್ಟಿಯವರಿಂದ ಯೋಗ ಪ್ರದರ್ಶನ ನಡೆಯಿತು.


ರಕ್ತದಾನ ಶಿಬಿರ ಉದ್ಘಾಟನೆ
ಕಾಮಧೇನು ಆರೋಗ್ಯ ಭಾಗ್ಯ ಯೋಜನೆಯಡಿ ಮಹಾಸಭೆಗೂ ಮೊದಲು ರಕ್ತದಾನ ಶಿಬಿರ ಉದ್ಘಾಟನೆ ನಡೆಯಿತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಅವರು ಶಿಬಿರ ಉದ್ಘಾಟಿಸಿದರು. ಕಾಮಧೇನು ಆರೋಗ್ಯ ಭಾಗ್ಯ ಯೋಜನೆಯನ್ನು ಅರಣ್ಯ ಇಲಾಖೆಯ ರವಿಚಂದ್ರ ಪಡುಬೆಟ್ಟು ಅವರು ಬಿಡುಗಡೆಗೊಳಿಸಿದರು. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ಪ್ರವೀಣ್‌ಕುಮಾರ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಅರಣ್ಯ ಇಲಾಖೆಯ ರವಿಚಂದ್ರ ಪಡುಬೆಟ್ಟು, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಇಚ್ಲಂಪಾಡಿ, ಜನಾರ್ದನ ಬಾಣಜಾಲು, ಕಾಮಧೇನು ಮಹಿಳಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೈತನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಉಷಾ ಅಂಚನ್ ಸ್ವಾಗತಿಸಿದರು. ಸುಧೀರ್‌ಕುಮಾರ್ ಶೆಟ್ಟಿ ನಿರೂಪಿಸಿದರು.



ಮಾಜಿ ಸಚಿವ ರಮಾನಾಥ ರೈ ಹುಟ್ಟುಹಬ್ಬ ಆಚರಣೆ
ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಈ ಸಂದರ್ಭದಲ್ಲಿ ಆಚರಿಸಲಾಯಿತು. ಅತಿಥಿಗಳು ಕೇಕ್ ತಿನ್ನಿಸುವ ಮೂಲಕ ರಮಾನಾಥ ರೈಯವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ ಮಾಡಿದರು.

LEAVE A REPLY

Please enter your comment!
Please enter your name here