ಪುತ್ತೂರು: ಮುಂದಿನ ಎರಡು ವರ್ಷದೊಳಗೆ ಕಬಕ-ವಿಟ್ಲ ರಸ್ತೆಯನ್ನು ಚತುಷ್ಫಥ ರಸ್ತೆಯನ್ನಾಗಿಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲ ಪಿಎಂಶ್ರೀ ಹಿ ಪ್ರಾಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಸುಮಾರು 60 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನುಅಭಿವೃದ್ದಿ ಮಾಡುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರಸ್ತೆ ಚತುಷ್ಪಥ ಆಗಬೇಕು ಎಂಬುದು ನನ್ನ ಕನಸಾಗಿದ್ದು ಅದನ್ನು ಖಂಡಿತವಾಗಿಯೂ ಮಾಡೇ ಮಾಡುತ್ತೇನೆ ಆಮೂಲಕ ವಿಟ್ಲ ಭಾಗವನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು.