ಪುತ್ತೂರು: ಆನಡ್ಕ ಸರಕಾರಿ ಹಿ ಪ್ರಾ ಶಾಲೆಯ ಶಿಕ್ಷಕಿಯನ್ನು ವರ್ಗಾವಣೆ ಮಾಡದಂತೆ ಶಾಲಾ ಎಸ್ಡಿಎಂಸಿ ಸಮಿತಿ ಹಾಗೂ ಪೋಷಕರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.
ಶಿಕ್ಷಕಿ ಹೇಮಲತಾ ಅವರು ಆನಡ್ಕ ಶಾಲೆಯ ಅಭಿವೃದ್ದಿ ಹಾಗೂ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಭೋಧನೆ ಮಾಡುವ ಅತ್ಯುತ್ತಮ ಕೌಶಲ್ಯವನ್ನು ಹೊಂದಿದ್ದು ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದುಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಆನಡ್ಕ ಶಾಲೆಯ ಶಿಕ್ಷಕಿ ವರ್ಗಾವಣೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಟೀಚರ್ ಒಳ್ಳೆಯವರಿರುವ ಕಾರಣ ಅವರನ್ನು ಉಳಿಸಬೇಕೆಂದು ಪೋಷಕರು ಪ್ರತಿಭಟನೆಯನ್ನು ಮಾಡಿದ್ದಾರೆ. ನಿಮ್ಮಬೇಡಿಕೆ ನ್ಯಾಯಯುತವಾಗಿದೆ ಆದರೆ ವರ್ಗಾವಣೆ ಪ್ರಕ್ರಿಯೆ ಸರಕಾರಿ ಮಟ್ಟದಲ್ಲಿ ನಡೆಯುತ್ತದೆ. ಆನಡ್ಕ ಶಾಲೆಯ ಶಿಕ್ಷಕಿ ವರ್ಗಾವಣೆ ವಿಚಾರವಾಗಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಈ ವೇಳೆ ಪೋಷಕರಾದ ರೂಪ,ಸುಜಾತ,ವಿದ್ಯಾ ಕೆ, ಪಿ ಹೇಮಲತಾ , ಶಶಿಕಲಾ ,ಪುಷ್ಪ,ಶೋಭಿತಾ,ವಿನೋದ್ ಕುಮಾರ್, ಸುರೇಶ,ಜಯಂತಿ,ಕೇಶವ ಗೌಡ,ಶ್ರೀಧರ ಎನ್,ಗೀತ,ಮೀನಾಕ್ಷಿ,ಸರೋಜಿನಿ ಮತ್ತಿತರರು ಇದ್ದರು.