ಉಪ್ಪಳಿಗೆ : ಮಹಿಳಾ ಜ್ಞಾನ ವಿಕಾಸದಡಿಯಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ

0

ನಿಡ್ಪಳ್ಳಿ: ಉಪ್ಪಳಿಗೆ ಅಮೃತ ವರ್ಷಿಣಿ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳಾ ಜ್ಞಾನ ವಿಕಾಸದಡಿಯಲ್ಲಿ ಪೌಷ್ಟಿಕ  ಆಹಾರ ಕಾರ್ಯಕ್ರಮ ಸೆ.14 ರಂದು ನಡೆಯಿತು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರರಾದ ಮೀನಾಕ್ಷಿ ಮಂಜುನಾಥ್  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಬೆಟ್ಟಂಪಾಡಿ ಪ್ರಾಥಮಿಕ ಅರೋಗ್ಯ ಇಲಾಖೆಯ ಅರೋಗ್ಯ ಅಧಿಕಾರಿ ಧನ್ಯಶ್ರೀ  ಸ್ವಚ್ಛತೆ, ಅರೋಗ್ಯ ನೆರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.ಆಶಾ ಕಾರ್ಯಕರ್ತೆ ಸರೋಜಿನಿ  ಪೌಷ್ಟಿಕ  ಆಹಾರದ ಬಗ್ಗೆ ಮಾಹಿತಿ ನೀಡಿದರು.ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್. ಜಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.ಗುಮ್ಮಟೆ ಗದ್ದೆ ಒಕ್ಕೂಟದ ಉಪಾಧ್ಯಕ್ಷರಾದ ಶೇಷಮ್ಮ ಉಪ್ಪಳಿಗೆ ಮತ್ತು ಉಪ್ಪಳಿಗೆ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕನಾಥ ಆಚಾರ್ಯ ಉಪಸ್ಥಿತರಿದ್ದರು.ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ರಂಜಿನಿ ವಿ. ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರು ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ಸ್ವಾಗತಿಸಿ ಕೇಂದ್ರದ ಸದಸ್ಯೆ ಪ್ರೇಮ ವಂದಿಸಿದರು.ತಾಲೂಕು ಸಮನ್ವಯಾಧಿಕಾರಿ ಕು.ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಸದಸ್ಯರು ಸುಮಾರು 32 ಬಗೆಯ ಪೌಷ್ಟಿಕ  ಆಹಾರ ತಯಾರಿಸಿ ತಂದು ಪ್ರದರ್ಶಿಸಿದ ನಂತರ ರುಚಿಯನ್ನು ಸವಿಯಲಾಯಿತು.

LEAVE A REPLY

Please enter your comment!
Please enter your name here