ವಿಟ್ಲ: ನಿಷೇಧಿತ ಮಾದಕ ವಸ್ತು ಮಾರಾಟ ; ಮೂವರು ವಶಕ್ಕೆ

0

ಪುತ್ತೂರು: ಅಳಿಕೆ ಗ್ರಾಮದ ಎರುಂಬು ಮೆಣಸಿನಗಂಡಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ ವಿಚಾರ ತಿಳಿದು ಬಂದಿದ್ದು, ಮೂವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಿಟ್ಲ ಮಂಗಳಪದವು ನಿವಾಸಿ ಸನತ್ ಕುಮಾರ್ (23), ಪೊನ್ನೊಟ್ಟು ನಿವಾಸಿ ಮಹಮ್ಮದ್ ರಾಝಿಕ್ (23), ಮಂಗಳಪದವು ನಿವಾಸಿ ಚೇತನ್ (23) ಬಂಧಿತರು. ಆರೋಪಿಗಳಿಂದ 6.27 ಗ್ರಾಂ ತೂಕದ ಗಾಂಜಾ, 3 ಮೊಬೈಲ್, ಒಂದು ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಸೆ.15ರಂದು ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಪೊಲೀಸರೊಂದಿಗೆ ಗಸ್ತಿನಲ್ಲಿದ್ದ ಸಂದರ್ಭ ಬಂದ ಖಚಿತ ಮಾಹಿತಿಯಂತೆ, ಸ್ಥಳಕ್ಕೆ ದಾಳಿ ಮಾಡಿದಾಗ 3 ಮಂದಿ ಸಂಶಯಾಸ್ಪದವಾಗಿ ನಿಂತಿರುವುದು ಕಂಡು ಬಂದಿದೆ. ತಪಾಸಣೆ ನಡೆಸಿದಾಗ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮೋಟಾರ್ ಸೈಕಲಿನಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು ಬಂದಿದೆ. ಇದನ್ನು ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ವರದಿಯಾಗಿದೆ.

LEAVE A REPLY

Please enter your comment!
Please enter your name here