ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಹಸುಗಳಿಗೆ ಜಂತು ಹುಳದ ಮಾತ್ರೆಯ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮಾಧರ ಇಡ್ಯಡ್ಕ, ನಿರ್ದೇಶಕರುಗಳಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ರಾಮಣ್ಣ ಗೌಡ ಪೊನ್ನೇತ್ತಡಿ, ವಾಸಪ್ಪ ಕೆ ಎಸ್, ಗಣೇಶ್ ಮುಂಗ್ಲಿಮನೆ, ರಾಜೀವಿ ಬೊಮ್ಮಳಿಗೆ, ಕಾಂತ ಪರವ, ಸಂಘದ ಕಾರ್ಯದರ್ಶಿ ದಮಯಂತಿ ಮುದುವ, ಸಿಬ್ಬಂದಿಗಳಾದ ಸವಿತಾ, ತಿಲಕ್ ಉಪಸ್ಥಿತರಿದ್ದರು.
