ಮಾಣಿ – ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ

0

ಶೀಘ್ರ ಕಾಮಗಾರಿ ಪ್ರಾರಂಭಿಸಲು‌ ಮನವಿ


ಬೆಂಗಳೂರು: ಮಾಣಿ – ಸಂಪಾಜೆ ಚತುಷ್ಪಥ ರಾ.ಹೆದ್ದಾರಿ 275 ರ ಕಾಮಗಾರಿಗೆ ಡಿಪಿಆರ್ ಮುಗಿದಿದ್ದು ವಾರ್ಷಿಕ ಯೋಜನೆಯಲ್ಲಿ ಹೆದ್ದಾರಿಯನ್ನು ಸೇರ್ಪಡೆಗೊಳಿಸಿ‌ ಕಾಮಗಾರಿ ಆರಂಭ ಮಾಡುವಂತೆ ಎನ್‌ಎಚ್ ರೀಜನಲ್ ಆಫೀಸರ್ ನರೇಂದ್ರ ಶರ್ಮ ಅವರಿಗೆ ಶಾಸಕ ಅಶೋಕ್ ರೈ ವಿನಂತಿಸಿದ್ದಾರೆ.


ಸೆ.17ರಂದು ಎನ್‌ಎಚ್ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ‌ ನರೇಂದ್ರ ಶರ್ಮಾ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು‌ ಡಿಪಿಆರ್ ಮಾಡಿಸಲು ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.10 ಕೋಟಿ‌ ರೂ ಅನುದಾನ ಬಿಡುಗಡೆಯಾಗಿ ಡಿಪಿಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ.‌ಇನ್ನು‌ಕಾಮಗಾರಿ‌ ಆರಂಭವಾಗಬೇಕಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ‌ ಈ ಯೋಜನೆಯನ್ನು ಸೇರಿಸಿಕೊಳ್ಳುವ ಮೂಲಕ ಕಾಮಗಾರಿ‌ ತ್ವರಿತಗೊಳಿಸಿ ಎಂದು ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಯಿಸಿದ ಶಾಸಕ ಅಶೋಕ್‌ ರೈ ಅವರು, ಮಾಣಿಯಿಂದ ಸಂಪಾಜೆ‌ ತನಕ ಚತುಷ್ಫಥ ಹೆದ್ದಾರಿಯಾದಲ್ಲಿ ಈ ಭಾಗ ಅಭಿವೃದ್ದಿಯಾಗಲಿದೆ. ಈ ಹಿಂದೆಯೇ ಇದು ಆಗಬೇಕಿತ್ತು.‌ ಚತುಷ್ಪಥ ಹೆದ್ದಾರಿಯನ್ನಾಗಿ ರೂಪಿಸಬೇಕು‌ ಎಂಬ ನಿಟ್ಟಿನಲ್ಲಿ‌ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ.ರಾಜ್ಯ ಸರಕಾರ ಡಿಪಿಆರ್ ಮಾಡಿಸಲಯ ಅನುದಾನವನ್ನು ಬಿಡುಗಡೆ ಮಾಡಿದೆ. ಕಾಮಗಾರಿ ವಿಳಂಬವಾಗಬಾರದು, ಆದಷ್ಟು‌ ಶೀಘ್ರ ಕಾಮಗಾರಿ‌ ನಡೆದು ಈ ಭಾಗದ‌ ಜನರ ಬಹುಕಾಲದ‌ ಕನಸು‌ ನನಸಾಗಬೇಕು ಎಂದರು.

LEAVE A REPLY

Please enter your comment!
Please enter your name here