ಪಾಣಾಜೆ; ಆರ್ಲಪದವು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಟ್ಟಿ ಮಡಿಕೆ

0

ನಿಡ್ಪಳ್ಳಿ: ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ಸೆ.14 ರಂದು ಆರ್ಲಪದವಿನಲ್ಲಿ ನಡೆದ 19 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಾಣಾಜೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಅಟ್ಟಿಮಡಿಕೆ ಆರ್ಲಪದವು ರಾಜ ರಸ್ತೆಯಲ್ಲಿ ನಡೆಯಿತು.

 ಮೈನವಿರೇಳಿಸುವ ಈ ಅಟ್ಟಿಮಡಿಕೆ ಸ್ಪರ್ಧೆಯಲ್ಲಿ ಒಟ್ಟು 6 ಆಹ್ವಾನಿತ ತಂಡಗಳು ಭಾಗವಹಿಸಿದ್ದು, ಸಾಹಸಮಯ ಕ್ರೀಡೆ ಕಿಕ್ಕಿರಿದು ಸೇರಿದ ಪ್ರೇಕ್ಷಕರ ಮನಸೂರೆಗೊಂಡಿತು.

ಫಲಿತಾಂಶ;
ವೀರ ಸಾವರ್ಕರ್ ಕಲ್ಲುಗುಡ್ಡೆ ಪ್ರಥಮ, ಟೀಮ್ ಚಕ್ರವರ್ತಿ ಕಡಬ ದ್ವಿತೀಯ, ಲಕ್ಷ್ಮೀ ಜನಾರ್ಧನ ಯುವಕ ಮಂಡಲ ಕೇಪು ಹಾಗೂ ಎಚ್.ಟಿ.ಎಂ.ಸಿ ಸುಳ್ಯ, ಶ್ರೀವಿಷ್ಣು ಪಿಜಕಲ ಮತ್ತು ಅಶ್ವ ಫ್ರೆಂಡ್ಸ್  ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here