ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನಿಂದ ಲಯನ್ಸ್ ಜಿಲ್ಲಾ ಯೋಜನೆಯಾದ ಅನ್ನಪೂರ್ಣ ಯೋಜನೆಯಡಿ ಅರ್ಹ 15 ಮಂದಿ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಸೆ.17 ರಂದು ಲಯನ್ಸ್ ಕ್ರೌನ್ ಅಧ್ಯಕ್ಷ ಅಂತೋನಿ ಒಲಿವೆರಾರವರ ಎಪಿಎಂಸಿ ರಸ್ತೆಯ ಸ್ವಗೃಹದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಲಯನ್ಸ್ ಪುತ್ತೂರು ಕ್ರೌನ್ ಅಧ್ಯಕ್ಷ ಅಂತೋನಿ ಒಲಿವೆರಾ, ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಗೈಡಿಂಗ್ ಲಯನ್ ಲ್ಯಾನ್ಸಿ ಮಸ್ಕರೇನ್ಹಸ್, ಸದಸ್ಯರಾದ ಐವನ್ ಫೆರ್ನಾಂಡೀಸ್, ಬೆಂಜಮಿನ್, ಅನಿತಾ, ಲಿಲ್ಲಿ, ಲೀನಾ ರೇಗೊ, ಮೋನಿಕಾ ಮಾಡ್ತಾರವರು ಉಪಸ್ಥಿತರಿದ್ದರು.
