ಪುತ್ತೂರು : ಬೊಳುವಾರು ಧ್ರುವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಹಾಗೂ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಲ್ಲುಗುಂಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಸಹಕಾರಿಯ ಸಮನ್ವಯ ಸಭಾಂಗಣದಲ್ಲಿ ಸೆ.17 ರಂದು ಪ್ರಾರಂಭಗೊಂಡಿತು.
ಶಿಬಿರದ ಉದ್ಘಾಟನೆಯನ್ನು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ದೀಪ ಪ್ರಜ್ವಲನೆ ನೆರವೇರಿಸಿ , ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು , ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷೆ ಯಮುನ ಬಿಎಸ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಹಾಜರಿದ್ದರು.
ಶಿಬಿರದ ಬಗ್ಗೆ ಮಾಹಿತಿಯನ್ನು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಮುಖ್ಯಸ್ಥರಾದ ಪ್ರಭಾಕರ ಸಾಲ್ಯಾನ್ ಮಾತನಾಡಿ , 99ನೆಯ ಈ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವನ್ನು ನಾವಿಂದು ಕಲ್ಲು ಗುಂಡಿ ಸಹಕಾರಿಯ ಸಭಾಂಗಣದಲ್ಲಿ ಆಯೋಜಿಸಿದ್ದೇವೆ. ಈ ಶಿಬಿರವು ಪ್ರತಿದಿನ ಬೆಳಿಗ್ಗೆ 10 ರಿಂದ ಪ್ರಾರಂಭಗೊಂಡು ಸಂಜೆ 4ರ ತನಕ ನಡೆಯಲಿದ್ದು , ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಸುಮಾರು 15 ದಿನಗಳ ಕಾಲ ನಡೆಯಲಿರುವ ಈ ಶಿಬಿರವು ಅ.1 ರಂದು ಕೊನೆಯಾಗಲಿದೆಯೆಂದು ಹೇಳಿ , ಹಲವಾರು ಸಮಸ್ಯೆ ಗಳಿಗೆ ಥೆರಪಿ ಮೂಲಕ ಶೀಘ್ರವಾಗಿ ಪ್ರಯೋಜನ ಪಡೆಯುವಂತೆ ವಿನಂತಿ ಮಾಡಿದರು.