ಸೆ.22: ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಇಂಡಿಯಾದಿಂದ ಇಂಜಿನಿಯರ‍್ಸ್ ಡೇ – ನೂತನ ಪದಾಧಿಕಾರಿಗಳ ಪದಪ್ರದಾನ

0

ಪುತ್ತೂರು: ವೃತ್ತಿಪರ ಇಂಜಿನಿಯರ್‌ಗಳಿಗೆ ಸಹಕಾರ ನೀಡುವುದು, ಕಾಮಗಾರಿಯಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹುಟ್ಟಿಕೊಂಡ ರಾಷ್ಟ್ರೀಯ ಸಂಸ್ಥೆಯಾಗಿರುವ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ವತಿಯಿಂದ ಇಂಜಿನಿಯರ‍್ಸ್ ಡೇ ಮತ್ತು ಸಂಸ್ಥೆಯ ಮುಂದಿನ 2 ವರ್ಷದ ಅವಧಿಗೆ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಸೆ.22ರಂದು ಸಂಜೆ ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ. ನಿಯೋಜಿತ ಅಧ್ಯಕ್ಷ ಶಿವರಾಮ್ ಎಂ.ಎಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್‌ನ ರಾಷ್ಟ್ರಮಟ್ಟದ ಸೆಕ್ರೆಟರಿ ಜನರಲ್ ಆಗಿರುವ ರಾಜೇಂದ್ರ ಕಲ್ಬಾವಿ ಅವರು ಅಧ್ಯಕ್ಷತೆ ವಹಿಸಿ ನೂತನ ಪದಾಧಿಕಾರಿ ಪದಪ್ರದಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಂಗಳೂರಿನ ಸಿಎಮ್‌ಟಿಐ ಇದರ ಸ್ಥಾಪಕರು ಮತ್ತು ಸಿಇಒ ಆಗಿರುವ ಅಶೋಕ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಸುಳ್ಯದ ಗಿರೀಶ್ ಬಾರದ್ವಾಜ್ ಅವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.


ಸನ್ಮಾನ:
ಕಾರ್ಯಕ್ರಮದಲ್ಲಿ ಹಿರಿಯ ಇಬ್ಬರು ಸಿವಿಲ್ ಇಂಜಿನಿಯರ‍್ಸ್ ಅವರನ್ನು ಸನ್ಮಾನಿಸಲಾಗುವುದು. ನೆಲ್ಯಾಡಿಯ ಶಿವಣ್ಣ ಹೆಗ್ಡೆ ಮತ್ತು ಪುತ್ತೂರು ಕನ್‌ಸ್ಟ್ರಕ್ಷನ್‌ನ ವಸಂತ ಭಟ್ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭ ನಮ್ಮ ಸದಸ್ಯರಲ್ಲೊಬ್ಬರಾದ ಅಜಿತ್ ಹೆಬ್ಬಾರ್‌ರು ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿ ಲೇಖನ ಬಿಡುಗಡೆಗೊಳ್ಳಲಿದೆ. ವಿವೇಕಾನಂದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಶಿವರಾಮ ಎಂ.ಎಸ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಇಂಡಿಯಾ ಇದರ ಕೋಶಾಧಿಕಾರಿ ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ನಿಯೋಜಿತ ಕಾರ್ಯದರ್ಶಿ ವೆಂಕಟ್‌ರಾಜ್ ಪಿ.ಜಿ, ಕಾರ್ಯಕಾರಿ ಸಮಿತಿಯ ನಿಯೋಜಿತ ಸದಸ್ಯ ಶಿವಪ್ರಸಾದ್ ಟಿ, ಸದಸ್ಯರಾದ ಶ್ರೀಕರ ಕಲ್ಲೂರಾಯ, ಕಾವ್ಯಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here