ಪುತ್ತೂರು : ಮಂಗಳೂರಿನ ದೇರಳಕಟ್ಟೆಯ ನವಾಜ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದಕ್ಷಿಣ ಕನ್ನಡ ಮತ್ತು ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಆಶ್ರಯದಲ್ಲಿ ನಡೆದ “ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ’ ಹಾಗೂ “‘ಭಾವೈಕ್ಯತೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ’ ಸಮಾರಂಭದಲ್ಲಿ ಸೆಪ್ಟೆಂಬರ್ 14 ರಂದು ಕವಯತ್ರಿ ಹಾಗೂ ಅನುವಾದಕಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಇವರಿಗೆ ” ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ – 2025″ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸೌದಿ ಅರೇಬಿಯಾದ ಉದ್ಯಮಿ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ‘ಮಾದಕತೆ ಮಾರಣಾಂತಿಕ’ ಕೃತಿಕಾರ , ಸಂಘಟಕ,ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ. ಎಂ. ಇಕ್ಬಾಲ್ ಬಾಳಿಲ, ಚಂದನ ಸಾಹಿತ್ಯ ವೇದಿಕೆಯ ಕವಿ, ಸಂಘಟಕ ಭೀಮ್ ರಾವ್ ವಾಷ್ಟಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಅಝೀಜ್ ಜೂರಿ ಪುಣಚ,ಹಿರಿಯ ಕವಿ,ವೈದ್ಯ ಡಾಕ್ಟರ್ ಸುರೇಶ್ ನೆಗಳಗುಳಿ, ಇರ್ಫಾನ್ ಕಾವು, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಡಾ. ಯು. ಟಿ .ಇಫ್ತಿಖಾರ್ ಅಲಿ, ಸ್ವಾಮಿಜಿ ಶ್ರೀ ವಸಂತ ಜೋಗಿ ಕುಂದಾಪುರ, ಹೈದರ್ ಪರ್ತಿಪ್ಪಾಡಿ,ಅಲ್ ಸಲಾಮ ಸಂಯೋಜಕ ಶೈಖ್ ಮುಹಮ್ಮದ್ ಇರ್ಫಾನಿ ಉಪಸ್ಥಿತರಿದ್ದರು. ನಂತರ ಪ್ರಧಾನ ವೇದಿಕೆಯಲ್ಲಿ ಭಾವೈಕ್ಯತೆ ಹಾಗೂ ಮಾದಕ ದ್ರವ್ಯ ವಿಷಯದ ಆಯ್ದ ಸ್ವರಚಿತ ಚುಟುಕುಗಳನ್ನು ಪ್ರಸ್ತುತಪಡಿಸಲಾಯಿತು.