ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಗ್ರಾಮದ ಕಲ್ಲಾಜೆ ನಿವಾಸಿ ಬೈಲುಗುತ್ತು ಜಯಕರ ರೈ ದಡ್ಡಂಗಡಿಯವರ ಉತ್ತರಕ್ರಿಯೆ, ವೈಕುಂಠ ಸಮರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸೆ.19ರಂದು ನಡೆಯಿತು.
ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್’ನ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಮೃತರ ಬದುಕು, ವ್ಯಕ್ತಿತ್ವದ ಬಗ್ಗೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ ಬೈಲುಗುತ್ತು, ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಸೇರಿದಂತೆ ಹಲವಾರು ಮಂದಿ ಪ್ರಮುಖರು, ಬೈಲುಗುತ್ತು ಕುಟುಂಬಸ್ಥರು, ದಡ್ಡಂಗಡಿ ಕುಟುಂಬಸ್ಥರು, ಬಂಧುಗಳು, ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ದಡ್ಡಂಗಡಿ ಕುಟುಂಬದ ಸರಸ್ವತಿ ಕೆಯ್ಯೂರು ಅವರ ಉತ್ತರಕ್ರಿಯೆ, ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಜಯಕರ ರೈವರ ಪತ್ನಿ ವಿಶಾಲಾಕ್ಷಿ ಜೆ.ರೈ, ಪುತ್ರಿಯರಾದ ಸುಮನ ರೈ, ಸಹನ ರೈ, ಸಾಧನಾ ರೈ, ಶ್ರೀದೇವಿ ರೈ, ಅಳಿಯಂದಿರಾದ ದಿನಕರ ಶೆಟ್ಟಿ, ಸಂತೋಷ್ ಶೆಟ್ಟಿ, ಯಶಸ್ವಿ ರೈ, ಸುಜ್ಞಾನ್ ರೈ ಹಾಗೂ ಮೊಮ್ಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.

ಮೌನ ಪ್ರಾರ್ಥನೆ, ಪುಷ್ಪಾರ್ಚನೆ-:
ಅಗಲಿದ ಪುಣಚ ಬೈಲುಗುತ್ತು ಜಯಕರ ರೈ ಕಲ್ಲಾಜೆ, ದಡ್ಡಂಗಡಿ ಹಾಗೂ ಕೆಯ್ಯೂರು ಸರಸ್ವತಿ ದಡ್ಡಂಗಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.