ಪುತ್ತೂರು: ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ,14 ಮತ್ತು 17 ವಯೋಮಿತಿಯ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಸೆ.19ರಂದು ಎಸ್ ಡಿ ಎಂ ಸಮಗ್ರ ಶಾಲೆ ಮಂಗಳ ಜ್ಯೋತಿ ವಾಮಂಜೂರಿನಲ್ಲಿ ನಡೆಯಿತು.
17ರ ವಯೋಮಾನದ ಬಾಲಕರ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಶ್ರೀರಾಮ ಶಾಲೆ ವೇದಶಂಕರ ನಗರ ಉಪ್ಪಿನಂಗಡಿಯ ವಿದ್ಯಾರ್ಥಿಗಳಾದ ತುಷಾರ್. ಎಸ್. ದೇವಾಡಿಗ (ಸುನೀತಾ ಶ್ರೀರಾಮ ಇವರ ಪುತ್ರ) ಹಾಗೂ ಪ್ರಣವ ನರಸಿಂಹ ಶರ್ಮಾ ಕೆ (ಅಶ್ವಿನಿ ಗಿರೀಶ್ ಶರ್ಮಾ ಇವರ ಪುತ್ರ) ಇವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.