ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

0

ಪುತ್ತೂರು: ಉತ್ತಮ ಸೇವೆಯೊಂದಿಗೆ ನಮ್ಮ ಜೊತೆ ಬೆಳೆಯಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿಯ ಜೆಎಂಜೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಿಯೋ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸದಸ್ಯತನ, ಪಾಲು ಬಂಡವಾಳ:
ವರದಿ ವರ್ಷದಲ್ಲಿ 765 ಸದಸ್ಯರಿದ್ದು, ರೂ.20,66,300 ಪಾಲು ಬಂಡವಾಳವಿರುತ್ತದೆ. ಸಂಘದಲ್ಲಿ ಆಭ್ಯುದಯ ಸಮೃದ್ಧಿ ಯೋಜನೆ, ಮಾಸಿಕ ಠೇವಣಿ ಯೋಜನೆ, ಪಿಗ್ಮಿ ಠೇವಣಿ, ನಿರಖು ಠೇವಣಿ, ಉಳಿತಾಯ ಖಾತೆ, ಮಾಸಿಕ ವರಮಾನ ಯೋಜನೆ, ಚಾಲ್ತಿ ಖಾತೆ ಹೀಗೆ ಒಟ್ಟು 4,27,06,735.42 ಠೇವಣಿ ಸಂಗ್ರಹವಿರುತ್ತದೆ. ಸದಸ್ಯರಿಗೆ ಆರ್ಥಿಕ ಸವಲತ್ತು ನೀಡುವ ಸಲುವಾಗಿ ಠೇವಣಿ ಸಾಲ, ವಾಹನ ಸಾಲ, ಮನೆ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ, ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಸಂಸ್ಥೆಯು ಸದಸ್ಯರ ಆಥಿಕ ಅಭಿವೃದ್ಧಿಗಾಗಿ ಹಲವಾರು ವಿವಿಧ ಸಾಲಗಳನ್ನು ನೀಡುತ್ತಿದ್ದು ವರ್ಷಾಂತ್ಯಕ್ಕೆ ರೂ.2,47,27,011 ಹೊರ ಬಾಕಿ ಇದ್ದು, ದುಡಿಯುವ ಬಂಡವಾಳ ರೂ.4,52,12,249.42 ಹೊಂದಿದೆ. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿದ ಎಲ್ಲಾ ಠೇವಣಿದಾರರಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಅಭಿನಂದನೆಯನ್ನು ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ಸಂಸ್ಥೆಯಲ್ಲಿ ತೊಡಗಿಸುವಂತೆ ಮನವಿ ಮಾಡಿದರು.


ಆಡಳಿತ ಮಂಡಳಿ ಸಭೆಗಳು:
ವರದಿ ಸಾಲಿನಲ್ಲಿ 12 ಆಡಳಿತ ಮಂಡಳಿ ಸಭೆಗಳು ಹಾಗೂ 18 ಉಪ ಸಮಿತಿ ಸಭೆಗಳು ಜರಗಿರುತ್ತದೆ. ಆಡಳಿತ ಮಂಡಳಿಯ ಸಭೆಗಳಲ್ಲಿ ಆಯವ್ಯಯ ಮಂಜೂರಾತಿ, ಸದಸ್ಯರ ಸೇರ್ಪಡೆ, ಸಾಲ ಸೌಲಭ್ಯಗಳ ವಿತರಣೆ, ಮರುಪಾವತಿ ವಿವರ ಪರಿಶೀಲನೆ ಮತ್ತು ಇತರ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸಂಸ್ಥೆಯ ಮೇಲೆ ಅಭಿಮಾನವಿಟ್ಟುಕೊಂಡು ಸಾಲವನ್ನು ಪಡೆದ ಸಾಲಗಾರರು ಸಕಾಲದಲ್ಲಿ ಮರು ಪಾವತಿಸಿ ಸಂಸ್ಥೆಗೆ ಸಹಕಾರ ನೀಡಿರುತ್ತಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.


ಸಾಮಾಜಿಕ ಸೇವಾ ಕಾರ್ಯಗಳು:
ಸಂಸ್ಥೆಯು ಲಾಭವನ್ನು ಗಳಿಸದೇ ಇದ್ದರೂ ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಯು ಕೇವಲ ವ್ಯಾಪಾರ ದೃಷ್ಟಿಯನ್ನು ಇಟ್ಟುಕೊಳ್ಳದೆ ಸದಸ್ಯರೊಂದಿಗೆ ನಿರಂತರ ಸಂಪರ್ಕದೊಂದಿಗೆ ಇರಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಕುಡಿಪಾಡಿ ಶಾಲಾ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ಆಗುವಷ್ಟು ಸ್ಯಾನಿಟರಿ ಪ್ಯಾಡ್, ಬೀರಮಲೆ ಪ್ರಜ್ಞಾ ಆನಾಥಾಶ್ರಮಕ್ಕೆ ಬಟ್ಟೆಬರೆ, ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ 2 ಅರ್ಹ ಫಲಾನುಭವಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.


ಸಂಸ್ಥೆಯ ನಿರ್ದೇಶಕಿ ಕ್ರಿಸ್ತಿನ್ ಡೀನಾ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿಗಳಾದ ಶ್ರೇಯ ಮತ್ತು ವಿಲ್ಮಾ ಪ್ರಿಯಾಂಕ ಡಿ’ಸೋಜ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ವಾಲ್ಟರ್ ಆರೋನ್ ಡಿ’ಸೋಜ ಸ್ವಾಗತಿಸಿ, ಸಿಬ್ಬಂದಿ ಧನುಷ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here