ಬೆಟ್ಟಂಪಾಡಿ:ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ 2025-26ನೇ ಸಾಲಿನ ಯೂತ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಲಾಯಿತು. ಕಾಲೇಜಿನ ಐ ಕ್ಯೂ ಎ ಸಿ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಸೆ. 19ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಆಸ್ಪತ್ರೆ ಕ್ಷಯರೋಗ ಮೇಲ್ವಿಚಾರಕ ರವಿ ಸುವರ್ಣ ಹಾಗೂ ರಾಷ್ಟೀಯ ಕಿಶೋರ್ ಸ್ವಾಸ್ತ್ಯ ಕಾರ್ಯಕ್ರಮದ ಸಮಾಲೋಚಕಿ ಸುಶ್ಮಿತಾ ಜಂಟಿಯಾಗಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಅವರು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿಯ ಅಗತ್ಯವನ್ನು ಹೇಳಿದರು.
ಈ ಸಂದರ್ಭದಲ್ಲಿ “ಸಾಮಾನ್ಯ ಆರೋಗ್ಯ” ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು. ರವಿ ಸುವರ್ಣ ಅವರು ಕ್ಷಯರೋಗದ ಲಕ್ಷಣಗಳು, ತಡೆಗಟ್ಟುವಿಕೆ ಹಾಗೂ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಸುಶ್ಮಿತಾ ಅವರು ಕಿಶೋರರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಪೌಷ್ಟಿಕತೆ ಹಾಗೂ ಜೀವನ ಶೈಲಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿ ಮಾತನಾಡಿದರು.

ವಿಶೇಷ ಕಾರ್ಯಕ್ರಮ:
‘ಸ್ವಸ್ಥ ನಾರಿ, ಶಕ್ತಿಪೂರ್ಣ ಕುಟುಂಬ’ ಯೋಜನೆಯ ಅಂಗವಾಗಿ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗಾಗಿ ಉಚಿತ ಹೀಮೋಗ್ಲೋಬಿನ್ (HB) ರಕ್ತ ಪರೀಕ್ಷೆ ನಡೆಸಲಾಯಿತು. ಈ ಪ್ರಯೋಗದಿಂದ ಯುವತಿಯರ ಆರೋಗ್ಯ ಮಟ್ಟವನ್ನು ಪರಿಶೀಲಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಶ್ರೀಮತಿ ಯಶೋದಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ರಾಜೇಶ್ವರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು YRC ಸಂಯೋಜಕರಾದ ಡಾ. ನಿರೀಕ್ಷಣ್ ಸಿಂಗ್ ಗೌಗಿ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಐಕ್ಯೂಎಸಿ ಸಂಯೋಜಕ ಪ್ರೊ. ರಾಮಚಂದ್ರ ಡಿ., ಪ್ರೊ. ಉದಯಶಂಕರ ಹೆಚ್, ಡಾ. ಲಾಯ್ಡ್ ವಿಕ್ಕಿ ಡಿ ಸೋಜ ಗ್ರಂಥಪಾಲಕ ಶ್ರೀ ರಾಮ ಕೆ ಹಾಗೂ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.