





ಪುತ್ತೂರು: ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ(74ವ) ನ.4ರಂದು ನಿಧನರಾದರು.


ದೇವದಾಸ್ ಗೌಡ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ.4ರಂದು ಅವರು ನಿಧನರಾದರು. 





ಮೃತರು ಪತ್ನಿ ಇಂದಿರಾ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿರುವ ಡಾ. ಯದುರಾಜ್ ಮತ್ತು ಪುತ್ರಿ ಡಾ. ಸಿಂಧೂರಾಣಿ ಹಾಗು ಸೊಸೆ, ಅಳಿಯ ಮೊಮ್ಮಕ್ಕಳನ್ನು ಅಗಲಿದ್ದಾರೆ.


            







