ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

1158.43 ಕೋಟಿ ರೂ.ವ್ಯವಹಾರ | 5.04 ಕೋಟಿ ರೂ.ನಿವ್ವಳ ಲಾಭ, ಶೇ.17 ಡಿವಿಡೆಂಡ್ ಘೋಷಣೆ

ಪುತ್ತೂರು: ಉಪ್ಪಿನಂಗಡಿ, ಪುತ್ತೂರು ಸಹಿತ ದ.ಕ.ಜಿಲ್ಲೆಯ ವಿವಿಧೆಡೆ 16 ಶಾಖೆ ಹೊಂದಿರುವ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ 1158.43 ಕೋಟಿ ರೂ.ವ್ಯವಹಾರ ನಡೆಸಿ 5.04 ಕೋಟಿ ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.17ರಂತೆ ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಸಂಘದಲ್ಲಿ 9047 ಸದಸ್ಯರಿದ್ದು 8.09 ಕೋಟಿ ರೂ. ಪಾಲು ಬಂಡವಾಳವಿದೆ. 229.47 ಕೋಟಿ ರೂ.ಠೇವಣಾತಿ, 19.78 ಕೋಟಿ ರೂ.ನಿಧಿಗಳು ಇವೆ. ಸಂಘದ ದುಡಿಯುವ ಬಂಡವಾಳ 259.66 ಕೋಟಿ ರೂ. ಆಗಿದೆ. 55.55 ಕೋಟಿ ರೂ.ವಿನಿಯೋಗಗಳು, 216.37 ಕೋಟಿ ರೂ.ಸಾಲ ಹೊಂದಿದ್ದು ಶೇ.95.04 ಸಾಲ ವಸೂಲಾತಿಯಾಗಿದೆ. ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದಿದೆ ಎಂದು ಸುರೇಶ್ ಕುಲಾಲ್ ಹೇಳಿದರು.


ಸಂಘದ ಸದಸ್ಯರಿಗೆ ಠೇವಣಿ ಮುಖೇನ ಉತ್ತಮ ಸೇವಾ ಸೌಲಭ್ಯ ನೀಡುವ ಸಮಾಜ ಸಂಧ್ಯಾ ಸಮೃದ್ಧಿ ನಿಧಿಯನ್ನು ಈ ಸಂದರ್ಭ ಉದ್ಘಾಟಿಸಲಾಯಿತು. ಉಪಾಧ್ಯಕ್ಷ ಜನಾರ್ದನ ಕುಲಾಲ್ ಬೊಂಡಾಲ, ನಿರ್ದೇಶಕರಾದ ಬಿ.ರಮೇಶ್ ಸಾಲ್ಯಾನ್, ಸುರೇಶ್ ಎನ್., ರಮೇಶ್ ಸಾಲ್ಯಾನ್, ಅರುಣ್‌ಕುಮಾರ್, ಭೋಜ ಸಾಲಿಯಾನ್, ಕಿರಣ್‌ಕುಮಾರ್ ಎ., ಪ್ರೇಮನಾಥ ಬಂಟ್ವಾಳ, ಹರೀಶ, ವಿದ್ಯಾ, ಮಾಲತಿ ಮಚೇಂದ್ರ, ಎಂ.ಕೆ.ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ರೇಖಾ ನಾಯ್ಕ್ ವೇದಿಕೆಯಲ್ಲಿದ್ದರು.


ನಿರ್ದೇಶಕ ಸತೀಶ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ., ವ್ಯವಸ್ಥಾಪಕ ವಿನೋದ್‌ಕುಮಾರ್ ಸಹಕರಿಸಿದರು. ನಿರ್ದೇಶಕ ಕಿರಣ್‌ಕುಮಾರ್ ಎ.ವಂದಿಸಿದರು. ಬಳಿಕ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ನೃತ್ಯ ಹಾಗೂ ಸಹಕಾರಿ ಬಂಧುಗಳಿಂದ ಮನೋರಂಜನೆ ನಡೆಯಿತು.


LEAVE A REPLY

Please enter your comment!
Please enter your name here