ಸಮಾಜಕ್ಕೆ ಪ್ರಗತಿ ಆಸ್ಪತ್ರೆಯ ಕೊಡುಗೆ ಅಪಾರವಾದುದು– ಡಾ. ಯದುರಾಜ್ ಡಿ. ಕೆ.
ಪುತ್ತೂರು: ವೈದ್ಯಕೀಯ ಕ್ಷೇತ್ರವು ವಿಫುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಜೀವ ರಕ್ಷಣೆಯ ಶ್ರೇಷ್ಠ ಉದ್ಯೋಗ ದೊರಕಿಸಿ ಕೊಡುವ ಪಾರ-ಮೆಡಿಕಲ್ ಶಿಕ್ಷಣವು ಉತ್ತಮ ವಾದುದು ಇಂತಹ ಶಿಕ್ಷಣದ ಜೊತೆಗೆ ಪ್ರಗತಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ಮೂಲಕ ವೈದ್ಯೋಪಾಚಾರ ನೀಡುತ್ತಿರುವ ಡಾ. ಶ್ರೀಪತಿ ರಾವ್ ಅವರ ಕನಸಿನ ಸಂಸ್ಥೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದುದು ಎಂದು ಪುತ್ತೂರು ತಾಲೂಕು ಆಸ್ಪತ್ರೆಯ ಉಪ ವೈದ್ಯಾಧಿಕಾರಿ ಡಾ. ಯದುರಾಜ್ ಡಿ. ಕೆ. ಹೇಳಿದರು.

ಅವರು ಪುತ್ತೂರು ಪುರಭವನದಲ್ಲಿ ನಡೆದ ಪ್ರಗತಿ ಪ್ಯಾರ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ಬೋಳ್ವಾರ್ ಪುತ್ತೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪ್ಪಿನಂಗಡಿಯ ಹಿರಿಯ ವೈದ್ಯರಾದ ಡಾ. ಕೆ. ಜಿ. ಭಟ್ ಸನ್ಮಾನ ಸ್ವೀಕರಿಸಿ ಮಾತಾಡಿ ವೈದ್ಯರ ಯಶಸ್ಸಿನಲ್ಲಿ ಟೆಕ್ನಿಶಿಯನ್ಸ್ ಪಾತ್ರ ದೊಡ್ಡದಾಗಿದ್ದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಬಾಂಧವ್ಯ ಅನನ್ಯವಾದುದು ಎಂದರು.
ಪ್ರಗತಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಯು. ಶ್ರೀಪತಿ ರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ತಮ್ಮ ವೃತ್ತಿ ಬದುಕಿನ ಅನುಭವ ಹಂಚಿಕೊಂಡರು. ಟ್ರಷ್ಟಿಯಾಗಿರುವ ಡಾ.ಸುಧಾ ಎಸ್ ರಾವ್ ವ್ಯಕ್ತಿಯ ಜೀವ ಉಳಿಸುವ ಜವಾಬ್ದಾರಿಯುತ ವೈದ್ಯಕೀಯ ವೃತ್ತಿ ಶ್ರೇಷ್ಠವಾದುದು ಎಂದರು. ಪ್ರಗತಿ ಶಿಕ್ಷಣ ಸಂಸ್ಥೆಗಳ ಆಡಳಿತಧಿಕಾರಿ ಪ್ರೀತಾ ಹೆಗ್ಡೆ, ಪ್ರಗತಿ ನರ್ಸಿಂಗ್ ಸಂಸ್ಥೆಯ ಪ್ರಾಚಾರ್ಯರಾದ ಹೇಮಲತಾ, ಪ್ಯಾರಾಮೆಡಿಕಲ್ ಸಂಸ್ಥೆಯ ಪ್ರಾಚಾರ್ಯರಾದ ಮಾನಸ, ಉಪ ಪ್ರಾಚಾರ್ಯರಾದ ಚೈತ್ರ, ಹಾಗೂ ವಿದ್ಯಾರ್ಥಿ ನಾಯಕ ಮುಹಮ್ಮದ್ ಸೈಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಮಾನಸ ವಾರ್ಷಿಕ ವರದಿ ವಾಚಿಸಿದರು. ಆಡಳಿತಧಿಕಾರಿ ಪ್ರೀತಾ ಹೆಗ್ಡೆ ಸ್ವಾಗತಿಸಿ, ಉಪ ಪ್ರಾಚಾರ್ಯರಾದ ಚೈತ್ರ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕರಾದ ಶಶಿಕುಮಾರ್ ಮತ್ತು ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.