ಪುತ್ತೂರು: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಹಿಂದಿ ದಿವಸ್ ಆಚರಣೆಯನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಪುತ್ತೂರು ತಾಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಉದಯ್ ಎಸ್ ವಹಿಸಿದ್ದರು. ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಾಯಿದೆ ದೇವುಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಭಾಷೆಯು ಸಂವಾದದ ಮಾಧ್ಯಮ, ಮಾತೃಭಾಷೆಯ ಜೊತೆಗೆ ದೇಶದ ಭಾಷೆಯನ್ನು ಅರಿತು ಅದನ್ನು ಶ್ರೀಮಂತ ಭಾಷೆಯನ್ನಾಗಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿ ಶುಭ ಹಾರೈಸಿದರು.

2024-25ನೇ ಸಾಲಿನ ವರದಿಯನ್ನು ಹಿಂದಿ ಸಂಘದ ಕಾರ್ಯದರ್ಶಿ ಸರಸ್ವತಿ ಮಂಡಿಸಿದರು. ಎಸ್ಎಸ್ಎಲ್ಸಿಯಲ್ಲಿ 100.ಶೇ ಫಲಿತಾಂಶ ಪಡೆದ
ಶಾಲೆಗಳನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಶಿಧರ ಜಿ.ಎಸ್, ಸಂಪನ್ಮೂಲ ನಿವೃತ್ತ ಪ್ರಾಧ್ಯಾಪಕರು ಮತ್ತು ಉಡುಪಿ ಜಿಲ್ಲಾ ಹಿಂದಿ ಅಧಿಕಾರಿ ಟಿ.ಎ ಚಾಕೋ ಹಾಗೂ ಸೇವಾ ನಿವೃತ್ತಿಗೊಂಡಿರುವ ರೊನಾಲ್ಡ್ ಮೊನೀಸ್ ಮೊದಲಾದವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದ.ಕ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ ಕುಮಾರಿ ಎನ್.ವಿ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಉದಯ. ಎಸ್ ಇವರು ಮುಂಬರುವ ಎಸ್ಎಸ್ಎ ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುವಂತೆ ಎಲ್ಲರೂ ಶ್ರಮ ಪಡಬೇಕೆಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಮ್ ಎಸ್ ಎ ಹಾಗೂ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರೋಸ್ಲಿನ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಿಯೂರುಕಟ್ಟೆ ಸ.ಪ.ಪೂ.ಕಾಲೇಜಿನ ಲೋಕೇಶ್ ಎಸ್ ಸ್ವಾಗತಿಸಿದರು. ಕಡಬ ಜೋಕಿಮ್ಸ್ ಪ್ರೌಢಶಾಲೆಯ ಶಿಕ್ಷಕಿ ವಿಜಯ ಕುಮಾರಿ ವಂದಿಸಿದರು. ವಳಾಲು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಶೈಲಾಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100 ಶೇಕಡ ಫಲಿತಾಂಶವನ್ನು ಪಡೆದ ಶಾಲೆಗಳ ವಿವರವನ್ನು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಹಿಂದಿ ಶಿಕ್ಷಕಿ ಸಂಧ್ಯ ರಾವ್ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ ಹರಿಣಾಕ್ಷಿ ವಾಚಿಸಿದರು. ಟಿ.ಎ ಚಾಕೋ ಅವರ ಪರಿಚಯವನ್ನು ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕಿ ಪಲ್ಲವಿ ಭಟ್ ವಾಚಿಸಿದರು. ರೊನಾಲ್ಡ್ ಮೊನೀಸ್ ಅವರ ಪರಿಚಯವನ್ನು ಕೊಂಬಟ್ಟು ಶಾಲೆಯ ಶಿಕ್ಷಕಿ ರಿನಿಟ ಸುಷ್ಮಾ ಡಿಸೋಜಾ ವಾಚಿಸಿದರು.ವಿಜಯ ಕುಮಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಪ್ರೌಢಶಾಲೆಯ ಶಿಕ್ಷಕರು ಹಾಗೂ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.