ಅಕ್ರಮ ದನ ಸಾಗಾಟ ಪ್ರಕರಣ : ಮಾರಾಟ ಮಾಡಿದಾತನ ಮೇಲೂ ಕೇಸು

0

ಪುತ್ತೂರು: ಪರ್ಲಡ್ಕದಲ್ಲಿ ಪತ್ತೆಯಾಗಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿ, ದನವನ್ನು ಮಾರಾಟ ಮಾಡಿದಾತನ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಪ್ಯ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಕಬಕ ಕಡೆಗೆ ಪಿಕಪ್ ವಾಹನವೊಂದರಲ್ಲಿ ದನವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿಯಾಧರಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪರ್ಲಡ್ಕದಲ್ಲಿ ಪಿಕಪ್ ವಾಹನವನ್ನು ನಿಲ್ಲಿಸಿ ನೋಡಿದಾಗ ಅದರೊಳಗಡೆ ದನವನ್ನು ಕಟ್ಟಿ ಹಾಕಿದ್ದು ಕಂಡು ಬಂದಿತ್ತು. ದನ ಸಾಗಾಟಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ. ಸದ್ರಿ ದನವನ್ನು ತಿಂಗಳಾಡಿ ಗಟ್ಟಮನೆ ಎಂಬಲ್ಲಿಯ ಪೂವಪ್ಪ ಎಂಬವರಿಂದ 17 ಸಾವಿರ ರೂ.ಗಳಿಗೆ ಖರೀದಿಸಿ ಕೆದಿಲದ ಮನೆಯೊಂದರಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ಪಿಕಪ್ ಚಾಲಕ ಮಾಹಿತಿ ನೀಡಿದ್ದು, ದನವನ್ನು ರಕ್ಷಣೆ ಮಾಡಿರುವ ಪೊಲೀಸರು ಅಬ್ದುಲ್ ಕರೀಂ ಕೆದಿಲ (38ವ.),ಅಬ್ದುಲ್ ಜಮೀರ್ ಕೆದಿಲ (27ವ.)ಮತ್ತು ದನವನ್ನು ಮಾರಾಟ ಮಾಡಿದ್ದ ಪೂವಪ್ಪ ತಿಂಗಳಾಡಿ ಗಟ್ಟಮನೆ ಎಂಬವರ ವಿರುದ್ಧ ಕಲಂ 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 66 ಜೊತೆಗೆ 192(ಎ)ಐಎಂವಿ ಕಾಯ್ದೆಯಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ.82/2025)ದಾಖಲಾಗಿದೆ.

LEAVE A REPLY

Please enter your comment!
Please enter your name here