ಪುತ್ತೂರು: ಪುತ್ತೂರಿನ ಹಿರಿಯ ಸಂಸ್ಥೆಯಾಗಿರುವ ಇಂದಿರಾ ಮೋಟಾರ್ ಡ್ರೈವಿಂಗ್ ಸ್ಕೂಲ್ನ ಮಾಲಕ ಎಂ ದೇವದಾಸ್ (78ವ)ರವರು ಸೆ.23ರಂದು ರಾತ್ರಿ ನಿಧನರಾದರು.
ಹಾರಾಡಿ ನಿವಾಸಿ ದೇವದಾಸ್ ಅವರು 1987ರಲ್ಲೇ ಪುತ್ತೂರಿನಲ್ಲಿ ಇಂದಿರಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಆರಂಭಿಸಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ನಿವೃತ್ತ ಶಿಕ್ಷಕಿ ಇಂದಿರಾ, ಪುತ್ರಿ ರಶ್ಮಿ, ಅಳಿಯ ಪ್ರದೀಪ್, ಮೊಮ್ಮಗ ಕಶ್ಯಪ್ ರನ್ನು ಅಗಲಿದ್ದಾರೆ.