ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

0

ನಿಡ್ಪಳ್ಳಿ : ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮತ್ತು 15 ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಸೆ.23 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

 ನರೇಗಾದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್. ಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಇರುವ ಕಾಮಗಾರಿಗಳು ಮತ್ತು ಅದಕ್ಕೆ ವಿಧಿಸಿರುವ ಮೊತ್ತಗಳ ಬಗ್ಗೆ ಮಾಹಿತಿ ನೀಡಿದರು.ನರೇಗಾದ ಗ್ರಾಮ ಸಂಪನ್ಮೂಲ ವ್ಯಕ್ತಿ ಚಂಚಲ ಕುಮಾರಿ.ಬಿ ವರದಿ ಸಾಲಿನಲ್ಲಿ ನಡೆದ ಕಾಮಗಾರಿಗಳ ವಿವರ ವಾಚಿಸಿದರು.

 ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ  ನರೇಗಾದ ತಾಂತ್ರಿಕ ಸಂಯೋಜಕ ವಿನೋದ್, ತೋಟಗಾರಿಕಾ ತಾಂತ್ರಿಕ ಸಹಾಯಕಿ ಆಕಾಂಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪುತ್ತೂರು ಮುಖ್ಯ ಪಶು ಸಂಗೋಪನಾ ವೈದ್ಯಾಧಿಕಾರಿ ಡಾ.ಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ನರೇಗಾದ ರಮೇಶ ಪೂಜಾರಿ, ಕೌಶಲ್ಯ ಡಿ.ಬಿ, 15 ನೇ ಹಣಕಾಸು ಯೋಜನೆಯ ಶ್ರೀವಿದ್ಯಾ, ಕಾರ್ತಿಕ್ ಎ ಮತ್ತು ಹೇಮಲತಾ ವಿವಿಧ ಜವಾಬ್ದಾರಿ ನಿರ್ವಹಿಸಿದರು.ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ, ಚಂದ್ರಶೇಖರ ರೈ, ಉಮಾವತಿ, ರಮ್ಯ, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಘಟಕದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.

 ಪಿಡಿಒ ಸೌಮ್ಯ ಎಂ.ಎಸ್ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ, ಸಂಜೀವಿನಿ ಒಕ್ಕೂಟದ ಚೈತ್ರ, ಲೋಲಾಕ್ಷಿ ಸಹಕರಿಸಿದರು.

ನರೇಗಾದಲ್ಲಿ ಒಟ್ಟು100 ಕಾಮಗಾರಿ ನಡೆದು ಒಟ್ಟು 4540 ಮಾನವ ದಿನ, ಕೂಲಿ ಮೊತ್ತ ರೂ. 15,74,688 ಮತ್ತು ಸಾಮಾಗ್ರಿ ವೆಚ್ಚ ರೂ. 921671 ಆಗಿದ್ದು ಒಟ್ಟು ರೂ. 24,96,359 ಆಗಿದೆ. 15 ನೇ ಹಣಕಾಸು ಯೋಜನೆಯಲ್ಲಿ ಒಟ್ಟು ರೂ. 17,17,914 ವೆಚ್ಚದ ಕಾಮಗಾರಿ ನಡೆದಿದೆ.

LEAVE A REPLY

Please enter your comment!
Please enter your name here