ಸೇಡಿಯಾಪು ರಸ್ತೆಯ ಜಾಗದ ಅತಿಕ್ರಮಣ ತೆರವು ವಿವಾದ ಇತ್ಯರ್ಥ-ರಸ್ತೆ ನಿರ್ಮಾಣಕ್ಕೆ ಜಾಗ ಗುರುತು

0

ಪುತ್ತೂರು;ಸುಮಾರು 10 ಮನೆಗಳಿರುವ ಸೇಡಿಯಾಪು ಕೆದಿಮಾರು ಎಂಬಲ್ಲಿ ಜಾಗದ ಅತಿಕ್ರಮಣ ತೆರವು ಮಾಡಿ ವಿವಾದ ವನ್ನು ಇತ್ಯರ್ಥ ಪಡಿಸಲಾಗಿದೆ.


ಪಡ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಸುಮಾರು 10 ಕುಟುಂಬಗಳಿರುವ ಕೆದಿಮಾರು ಪ್ರದೇಶಕ್ಕೆ ತೆರಳಲು ರಸ್ತೆ ಸೌಲಭ್ಯವಿಲ್ಲದೇ ಇದ್ದು, ರಸ್ತೆಯ ಜಾಗವನ್ನು ಸ್ಥಳೀಯರು ಅತಿಕ್ರಮಣ ಮಾಡಿಕೊಂಡಿದ್ದರು. ಇದರ ಬಗ್ಗೆ ಅಲ್ಲಿನ ನಿವಾಸಿಗಳು ಶಾಸಕರು ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂದಿಸಿದಂತೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್‌ರವರ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಮಕ್ಷಮದಲ್ಲಿ ಸ್ಥಳ ತನಿಖೆ ನಡೆಸಿದರು. ಜಾಗ ಅತಿಕ್ರಮಣ ಮಾಡಿರುವುದನ್ನು ತೆರವು ಮಾಡಿ ರಸ್ತೆ ನಿರ್ಮಾಣಕ್ಕೆ ಜಾಗ ಗುರುತಿಸಿ ವಿವಾದವನ್ನು ಇತ್ಯರ್ಥಪಡಿಸಿದರು. ಕಂದಾಯ ಇಲಾಖೆಯ ಸಿಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here