ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ವಿಕಲ ಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಕಾರ್ಯಕರ್ತರು ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ದರ್ಶಿನಿ ಕಾರ್ಯಕ್ರಮ ಹಾಗೂ ಗ್ರಂಥಾಲಯದಲ್ಲಿ ವಿಕಲ ಚೇತನರ ಹಾಗೂ ಅಂದ ವಿಕಲ ಚೇತನವ್ಯಕ್ತಿಗಳ ಸಹಾಯಕ ಸಾಧನ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಸೆ.24ರಂದು ನಡೆಯಿತು.
ತರಬೇತಿದಾರರಾಗಿ ನರಿಮೊಗ್ರು ಗ್ರಾಮ ಪಂಚಾಯತ್ ನ ಗ್ರಂಥಾಲಯ ಮೇಲ್ವಿಚಾರಕರಾದ ವರುಣ್, ಪುತ್ತೂರು ತಾಲ್ಲೂಕು ಪಂಚಾಯತ್ ಬಹು ಮಟ್ಟದ ಪುನರ್ ವಸತಿ ಕಾರ್ಯಕರ್ತರಾ ದ ನವೀನ್ ಕುಮಾರ್, ಮೈಸೂರು ಅಬ್ದುಲ್ ನಜಿರ್ ಸಂಸ್ಥೆಯ ಪುತ್ತೂರು ತಾಲ್ಲೂಕು ಪಂಚಾಯತ್ ತರಬೇತಿ ತರಬೇತಿದಾರ ಮಹಮ್ಮದ್ ಬಡಗನ್ನೂರು, ಪುತ್ತೂರು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಲ್ ಪ್ರೈಡ್ ರೋಡಿಗ್ರಸ್, ಪುತ್ತೂರು ತಾಲ್ಲೂಕು ಪಂಚಾಯತ್ ಮನೆಜರ್ ಶ್ರೀ ಜಯ ಪ್ರಕಾಶ್ ಪುತ್ತೂರು, ಪುತ್ತೂರು ತಾಲ್ಲೂಕು ಪಂಚಾಯತ್ ನರೇಗಾ ನಿರ್ದೇಶಕರಾದ ಭರತ್ ರಾಜ್, ಪುತ್ತೂರು ತಾಲ್ಲೂಕು ಗ್ರಾಮ ಪಂಚಾಯತ್ ನ ಎಲ್ಲಾ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಉಪ ಸ್ಥಿತಿಯಿದ್ದರು.