ಸರಕಾರಿ ನೌಕರರ ಸಹಕಾರ ಸಂಘದ ಮಹಾಸಭೆ

0

ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರೂ ಸಹಕರಿಸಿ-ಅಬ್ರಹಾಂ ಎಸ್.ಎ.

ಪುತ್ತೂರು: ಸರಕಾರಿ ನೌಕರರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.24ರಂದು ತಾಲೂಕು ಆಡಳಿತ ಸೌಧದ ಬಳಿಯ ಸರಕಾರಿ ನೌಕರರ ಸಂಘದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ಮಾತನಾಡಿ, ಸರಕಾರಿ ನೌಕರರಿಗೂ ಒಂದು ಸಹಕಾರ ಸಂಘ ಬೇಕು ಎಂಬ ಹಲವು ವರ್ಷಗಳ ಕನಸು ನನಸಾಗಿದೆ. ಕಳೆದ ಜನವರಿಯಲ್ಲಿ ಪ್ರಾರಂಭಗೊಂಡಿರುವ ನಮ್ಮ ಸಂಘವು ಅಂಬೆಗಾಲಿಡುತ್ತಾ ಸಾಗುತ್ತಿದೆ. ಸಂಘದಲ್ಲಿ ಅತ್ಯುತ್ತಮವಾಗಿ ವ್ಯವಹಾರಗಳು ನಡೆಯುತ್ತಿದೆ. ಸಾಲಗಳಿಗೆ ಸಾಕಷ್ಟು ಬೇಡಿಕೆಗಳಿವೆ. ದೀರ್ಘಾವಧಿ ಸಾಲಗಳನ್ನೂ ನೀಡಲಾಗಿದೆ. ರೂ.೧೫ಲಕ್ಷ ಠೇವಣಿ ಸಂಗ್ರಹವಾಗಿದೆ. ಸಾಲಗಳಿಗೆ ಸಾಕಷ್ಟು ಬೇಡಿಕೆಯಿದ್ದು ಠೇವಣಿಯ ಆವಶ್ಯಕತೆಯಿದೆ. ಹೀಗಾಗಿ ಸಂಘದಲ್ಲಿ ಠೇವಣಿಯಿಟ್ಟು ಸಹಕರಿಸುವಂತೆ ಎಲ್ಲಾ ನಿರ್ದೇಶಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರೇರೇಪಿಸಬೇಕು. ಸಂಘದಲ್ಲಿ ಬಂಡವಾಳ ತೊಡಗಿಸಲು ಸದಸ್ಯರು ಸಹಕರಿಸಬೇಕು. ವ್ಯವಹಾರಗಳು ವೃದ್ಧಿಯಾದಾಗ ಡಿವಿಡೆಂಡ್ ನೀಡಲು ಸಾಧ್ಯವಾಗುತ್ತಿದ್ದು ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ಮನವಿ ಮಾಡಿದರು.


ದೀರ್ಘಾವಧಿ ಸಾಲಗಳನ್ನು ಗರೀಷ್ಠ ರೂ.10ಲಕ್ಷವನ್ನು ಹತ್ತು ವರ್ಷಗಳ ಅವಧಿಗೆ ನೀಡುವುದು ಹಾಗೂ ಸದಸ್ಯರಿಗೆ ತುರ್ತು ಸಾಲಗಳನ್ನು ರೂ.2 ಲಕ್ಷ ನೀಡುವ ಬಗ್ಗೆ ತಿದ್ದುಪಡಿ ಮಾಡುವ ಬಗ್ಗೆ ಮಹಾಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ನಿರ್ದೇಶಕರಾದ ವಿಜಯ ಕುಮಾರ್ ಕೆ., ಎಫ್‌ಜಿಎಂ ಗೌಡ, ಸುಧೀರ್ ಪಿ., ಹರಿಪ್ರಕಾಶ್ ಬೈಲಾಡಿ, ಕೃಷ್ಣ ಬಿ., ಗಣೇಶ್ ಕೆ.ಎಂ., ಚಂದ್ರಶೇಖರ ನಾಯ್ಕ, ಹರಿಣಾಕ್ಷಿ, ಸಂದೀಪ್, ತನುಜಾ ಹಾಗೂ ಕವಿತಾ ಉಪಸ್ಥಿತರಿದ್ದರು.


ಕಾರ್ಮಿಕ ಇಲಾಖೆಯ ಸಾವಿತ್ರಿ ಬಿ. ಪ್ರಾರ್ಥಿಸಿದರು. ಉಪಾಧ್ಯಕ್ಷ ನಾಗೇಶ್ ಎಂ. ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಭಟ್ ವರದಿ, ಆಯ-ವ್ಯಯ ಮಂಡಿಸಿದರು. ಸಿಬ್ಬಂದಿ ನವ್ಯ ಮಹಾಸಭೆಯ ನೋಟೀಸ್ ಓದಿದರು. ನಿರ್ದೇಶಕರಾದ ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿ, ಶಿವಾನಂದ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here