ದೇರಳಕಟ್ಟೆಯಲ್ಲಿ ಸೆ.14ರಂದು ನಡೆದ ರಾಜ್ಯ ಭಾವೈಕ್ಯ ಪರಿಷತ್ ದ.ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಯವರು ಆಯೋಜಿಸಿದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಯತ್ರಿ, ಲೇಖಕಿ ವಿಂಧ್ಯಾ.ಎಸ್.ರೈ ಇವರಿಗೆ ‘ಭಾವೈಕ್ಯತಾ ಸಾಹಿತ್ಯರತ್ನ’ ಪ್ರಶಸ್ತಿ ಲಭಿಸಿದೆ.

ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿರುವ ಇವರು ಸಾಹಿತ್ಯಿಕ, ಸಾಮಾಜಿಕ, ಕ್ರೀಡೆ, ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆಗಳಿಂದ ತನ್ನದೇ ಆದ ಛಾಪು ಮೂಡಿಸಿಕೊಂಡು ಹಲವಾರು ಬಹುಮಾನ, ಪ್ರಶಸ್ತಿಗಳಿಗೆ ಭಾಜನರಾದವರು.ಕಡೇಶಿವಾಲಯದ ಕುರುಂಬ್ಲಾಜೆಗುತ್ತು ಶ್ರೀ ಸುಂದರ ರೈಯವರ ಧರ್ಮಪತ್ನಿಯಾಗಿರುವ ಇವರು ಪ್ರಸ್ತುತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.