ಬಡಗನ್ನೂರು: ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ನಡೆಸಲ್ಲಡುವ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯಲ್ಲಿ 2025ನೇ ಸಾಲಿನ ಶಾರದಾ ಪೂಜೆ ಮತ್ತು ಅಕ್ಷರಾರಂಭ ಕಾರ್ಯಕ್ರಮ ಅ.2ರಂದು ಬೆಳಗ್ಗೆ ಗಂ.10ರಿಂದ ಸಂಸ್ಥೆ ಸಭಾಂಗಣ ನಡೆಯಲಿದೆ.
ಶಾಲಾ ಎಸ್ ಡಿಯಂಸಿ ಅಧ್ಯಕ್ಷರುಗಳು, ಮತ್ತು ಸರ್ವಸದಸ್ಯರು, ಮಕ್ಕಳು ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಆಶಿರ್ವಾದ ಪಡೆದುಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಕ್ಷರಾರಂಭ ಕಾರ್ಯಕ್ರಮಕ್ಕೆ ನೋಂದಣಿ ಮಾಡಲು ಬಯಸುವವರು +91 9535622839 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.