ಸವಣೂರು: ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹಘಟಕದ ವತಿಯಿಂದ ಕಾನೂನು ಮತ್ತು ಮಹಿಳೆ ಎನ್ನುವ ವಿಚಾರದ ಬಗ್ಗೆ ಮಾಹಿತಿ ಕಾರ್ಯಕ್ರಮ ಸೆ .27ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಪ್ರತಿಯೊಬ್ಬನಲ್ಲೂ ಬಂದಾಗ ಕಾನೂನು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಇಂಜಿನಿಯರ್ ಮಹೇಶ್ ಎಸ್ ರೈ ಟ್ರಸ್ಟಿಗಳು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು ಇವರು ಇಂದಿನ ವೈಜ್ಞಾನಿಕ,ತಾಂತ್ರಿಕ ಯುಗದಲ್ಲಿ ಬಹಳಷ್ಟು ಮುಂದಕ್ಕೆ ಬಂದು ಕೃತಕ ಬುದ್ಧಿಮತ್ತೆಯು ಅಸ್ತಿತ್ವದಲ್ಲಿರುವ ಸಮಾಜದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಶ್ನಿಸುವ ಹಾಗೂ ಸಂವಹನ ಕೌಶಲವನ್ನು ಹೆಚ್ಚಿಸಿಕೊಂಡು ಕಾನೂನಿನ ಮಹತ್ವವನ್ನು ಅರಿತು ಬಾಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪುತ್ತೂರು ತುಳುಕೂಟದ ಉಪಾಧ್ಯಕ್ಷರಾದ ಅಡ್ವಕೇಟ್ ಹೀರಾ ಉದಯ್ ರವರು ಕಾನೂನಿನ ಮುಂದೆ ಗಂಡು-ಹೆಣ್ಣು ಎಲ್ಲರೂ ಸಮಾನರೇ, ಆದರೆ ಇಡೀ ಸಮಾಜವನ್ನು ಬದಲಿಸುವ ಸಾಮರ್ಥ್ಯ ಹೆಣ್ಣಿಗಿದೆ ಎಂದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಲಕ್ಷೀ ಎಸ್ ರೈ, ಐ.ಕ್ಯೂ.ಎ.ಸಿ ಸಂಘಟಕರಾದ ಕೌಶಲ್ಯಾ ಎಸ್ ಹಾಗೂ ಮಹಿಳಾ ದೌರ್ಜನ್ಯ ನಿಗ್ರಹಘಟಕದ ಸಂಘಟಕರಾದ ಶ್ರೀಯುತ. ಶೇಷಗಿರಿ ಎಂ ಹಾಗೂ ಪ್ರತಿಭಾ ಎಸ್. ಹಾಗೂ ವಿದ್ಯಾರ್ಥಿ ಸಂಘಟಕರಾದ ಅಂಕಿತಾ ಟಿ.ಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ಸಂಘಟಕರಾದ ಪ್ರತಿಭಾ ಭಟ್ ಸ್ವಾಗತಿಸಿ, ವಿದ್ಯಾರ್ಥಿ ಸಂಘಟಕರಾದ ಅಸ್ಮಿತಾ ಎ ವಂದಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿಯಾದ ನಿತ್ಯಶ್ರೀ ಅತಿಥಿಗಳ ಪರಿಚಯವನ್ನು ಮಾಡಿದರು. ವಿದ್ಯಾರ್ಥಿಗಳಾದ ಪವನ್, ಸರಸ್ವತಿ, ಚತುರ್ಥ್, ದೀಕ್ಷಿತ್ ಹಾಗೂ ಪ್ರಿಯಾಂಕರವರ ಆಶಯಗೀತೆಯೊಂದಿಗೆ ಆರಂಭಗೊಂಡಿತು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿಯಾದ ಪವಿತ್ರಾ ಕಾರ್ಯಕ್ರಮದ ನಿರೂಪಣೆಗೈದರು.