ಪುತ್ತೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಮಾಜಮುಖಿ ಸೇವೆ ಮಾಡುತ್ತಿರುವ ಪುತ್ತೂರಿನ ವಿಜಯ ಸಾಮ್ರಾಟ್ ನೇತೃತ್ವದದಲ್ಲಿ ಸೆ.28ರಂದು ಪುತ್ತೂರುದ ಪಿಲಿಗೊಬ್ಬು ಸೀಸನ್ -3 ಕಾರ್ಯಕ್ರಮಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಚಾಲನೆ ದೊರೆತಿದೆ.

ಎಡನೀರು ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಿದರು. ಪುತ್ತೂರಿನ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಪಿಲಿಗೊಬ್ಬು ಕಾರ್ಯಕ್ರಮ ಉದ್ಘಾಟಿಸಿದರು. ಪಿಲಿಗೊಬ್ಬು ವೇದಿಕೆಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಿದರು. ಸಹಜ್ ರೈ ಬಳಜ್ಜ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

8 ಹುಲಿವೇಷ ತಂಡಗಳಿಂದ ಪ್ರದರ್ಶನ – ಗೌರವ ಸಂಭಾವನೆ
(ಪ್ರ) 3ಲಕ್ಷ, (ದ್ವಿ)2ಲಕ್ಷ, (ತೃ) 1ಲಕ್ಷ ರೂಪಾಯಿ ಬಹುಮಾನ
ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 8 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ, ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 5೦,೦೦೦ ಗೌರವ ಸಂಭಾವನೆ. ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗ ದಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ, ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನ. ಪಂದ್ಯಶ್ರೇಷ್ಠದಲ್ಲಿ ಪುತ್ತೂರುದ ಪಿಲಿ ಮತ್ತು ಕಪ್ಪು ಹುಲಿಗೆ ನಗದು ಬಹುಮಾನ ರೂ. 10 ಸಾವಿರ ಮತ್ತು ಎಲ್‌ಇಡಿ ಟಿವಿ.ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ಪ್ಲಸ್ 1 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪ್ರತಿ ತಂಡಕ್ಕೂ ರೂ. 50 ಸಾವಿರ ನೀಡಿ ಗೌರವ ಇರಲಿದೆ.
8 ಹುಲಿವೇಷ ತಂಡ
ತಂಡಗಳಿಂದ ಪ್ರದರ್ಶನದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 8 ಹುಲಿವೇಷ ತಂಡಗಳು ಪುತ್ತೂರುದ ಪಿಲಿಗೊಬ್ಬುವಿನಲ್ಲಿ ಪ್ರದರ್ಶನ ನೀಡಲಿವೆ.ಉಪ್ಪಳದ ಶ್ರೀ ದೇವಿ ಟೈಗರ‍್ಸ್, ಅಂಗರುಗುಡ್ಡೆ ಫ್ರೆಂಡ್ಸ್, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಎಮ್‌ಎಫ್ ಸಿ, ಮುರಳಿಬ್ರದರ‍್ಸ್ ಟೈಗರ್ ಟ್ರೂಪ್ ಪುತ್ತೂರು, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ಮಂಗಳೂರು, ಶ್ರೀ ಮಹಾಕಾಳಿ ಕ್ರೀಡಾಬಳಗ ತುಮಿನಾಡು, ಅಗಸ್ತ್ಯ ಮಂಗಳೂರು, ಡಿಜೆ ಬಾಯ್ಸ್ ಹೊಸಂಗಡಿ ಹುಲಿ ವೇಷ ತಂಡಗಳು ಪ್ರದರ್ಶನ ನೀಡಲಿದೆ.ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ.3 ಲಕ್ಷ, ದ್ವಿತೀಯ ಬಹುಮಾನವಾಗಿ ರೂ.2 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ರೂ.1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 5೦,೦೦೦ ರೂ.ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು.ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗದಲ್ಲಿ ಉತ್ತಮ ಪ್ರವೇಶ ಹಾಗೂ ನಿರ್ಗಮನ, ಉತ್ತಮ ತಾಸೆ, ಉತ್ತಮ ಬಣ್ಣ ಉತ್ತಮ ಧರಣಿ ಮಂಡಲ ಕುಣಿತ ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ 1೦,೦೦೦ ರೂ.ನಗದು ಬಹುಮಾನದ 10೦ ಪ್ರತ್ಯೇಕ ವೈಯುಕ್ತಿಕ ಬಹುಮಾನವಿದೆ.

ತಾರಾ ಮೆರುಗು:
ಕಾರ್ಯಕ್ರಮದಲ್ಲಿ ತುಳುನಾಡಿನ ಹೆಸರಾಂತ ಕೋಸ್ಟಲ್‌ವುಡ್ ಮತ್ತು ರಾಜ್ಯದ ಹೆಸರಾಂತ ಸ್ಯಾಂಡಲ್ ವುಡ್ ನಟ, ನಟಿಯರು ಭಾಗವಹಿಸಲಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ತ್ರಿವಿಕ್ರಮ್, ಧನ್‌ರಾಜ್ ಆಚಾರ್ಯ, ಸೀರಿಯಲ್ ನಟಿ ವೈಷ್ಣವಿ, ಸೂ ಫ್ರಮ್ ಸೋ ಚಲನ ಚಿತ್ರದ ನಾಲ್ವರು ನಟರು ಸಹಿತ ಇನ್ನೂ ಹಲವಾರು ಮಂದಿ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಎಂದು ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.

ಫುಡ್ ಫೆಸ್ಟ್
ಸೆ.27ರ ಸಂಜೆ ಫುಡ್ ಫೆಸ್ಟ್ ಗೆ ಚಾಲನೆ ದೊರೆತಿದ್ದು, ಪುತ್ತೂರುದ ಪಿಲಿಗೊಬ್ಬು ಸಿಸನ್ -3 ಇನ್ನಷ್ಟು ಮೆರುಗು ನೀಡಲು ಫುಡ್ ಫೆಸ್ಟ್ ಶ್ರೇಷ್ಠಮಟ್ಟದ ಆಹಾರ ಮಳಿಗೆಗಳು ಫುಡ್ ಫೆಸ್ಟ್‌ನಲ್ಲಿ ಪಾಲು ಪಡೆಯುತ್ತಿದ್ದು,ವಿಶಿಷ್ಟ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವುದು ಫುಡ್ ಫೆಸ್ಟ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಅನ್ನುತ್ತಿದ್ದಾರೆ ಸಂಘಟಕರು.ಸುಮಾರು 45 ಮಳಿಗಳು ಫುಡ್ ಫೆಸ್ಟ್‌ನಲ್ಲಿ ಇವೆ. ಪುತ್ತೂರ‍್ದ ಮುತ್ತು ಸ್ಪೆಷಲ್ ಚರುಂಬುರಿ ಆಂಡ್ ಜ್ಯೂಸ್, ಪುತ್ತೂರ‍್ದ ಮುತ್ತು ಸ್ಪೆಷಲ್ ಪಾಲಕ್ ರುಮಾಲಿ ರೋಟಿ, ಮೋಜಿಟೋ ಆಂಡ್ ಲೈಸ್ ಚಾಟ್, ನಾಯಕ್ಸ್ ಸ್ವೀಟ್ಸ್, ಪೊಟ್ಯಾಟೋ ಟ್ವಿಸ್ಟರ್, ಆಯುಷಿ ಸೋಡಾ ಶರಬತ್ತು,ಪ್ರಭು ಚರುಂಬುರಿ ಆಂಡ್ ಚಾಟ್ಸ್,ಕೈಲಾರ್ ನ್ಯಾಚುರಲ್ ಐಸ್‌ಕ್ರೀಮ್, ಬೆಂಗಳೂರು ಸ್ಪೆಷಲ್ ರುಮಾಲಿ ರೋಟಿ, ಮಿರ್ಚಿ ಮಸಾಲ ಚಾಟ್ಸ್,ನೆನಪಿರಲಿ ಲೈಮ್ ಸೋಡಾ, ಆರ್ ಆರ್ ಮೊಮೊಸ್, ಶ್ರವಣ್ ಪನ್ನೀರ್ ಟಿಕ್ಕಾ, ಕೋಕೊ ಗುರು, ಪುತ್ತೂರುದ ಸ್ಪೆಷಲ್ ಪಾಲಕ್, ರೂಮಾಲಿ ರೋಟಿ, ಮಿಲ್ಕಿಮಿಸ್ಟ್, ವಿಷ್ಣು ಕೈಲಾಸ್ ಚಾಟ್, ಶೋಭಿತ್ ಹಲಸಿನ ಹೋಳಿಗೆ, ನವಮಿತದಾಸ, ಐಡಿಯಲ್ ಐಸ್ ಕ್ರೀಮ್, ಐಸ್ ಆಂಡ್ ಮಿಲ್ಕ್, ಮುಕೇಶ್ ಕೈಲಾಸ್ ಚಾಟ್ಸ್, ಪುತ್ತೂರ‍್ದ ಸ್ಪೆಷಲ್ ರುಮಾಲಿ ರೋಟಿ, ದಾವಣಗೆರೆ ಬೆಣ್ಣೆ ದೋಸೆ, ಶ್ರೀ ಮಹಾಲಿಂಗೇಶ್ವರ ಗೋಬಿ ಆಂಡ್ ಚಾಟ್ಸ್, ಭವಿತ ಮೆನ್‌ಪದವು ಚರುಂಬುರಿ, ಮೆನ್‌ಪದವು ಅವಿಲ್ ಮಿಲ್ಕ್ ಶೇಖ್, ಮೊಕ್‌ಕಾಟ್, ಶ್ರೀಗುರು ಚಾಟ್ಸ್, ಮಲ್ಲಿಕಾ ಮಶ್ರೂಮ್ ಬಿರಿಯಾನಿ, ಡ್ರೈ ಗೋಬಿ ಬೆಂಗಳೂರು, ನಂದಿನಿ ಸ್ಟಾಲ್, ಪುತ್ತೂರು ಚಿಲ್ಲಿ ಸ್ಪೈಸಿ,
ಶ್ರೀ ದುರ್ಗಾಪರಮೇಶ್ವರಿ ಸ್ವೀಟ್ಸ್, ದಿವಾಕರ್ ಸ್ಪರ್ಶ ಲೈಸ್, ಭೀಮಾ ಜ್ಯುವೆಲ್ಲರ‍್ಸ್, ಬಿಂದು ಸಂಸ್ಥೆ, ಮಂಗಳೂರು ಶ್ರೀದೇವಿ ಚರುಂಬುರಿ, ಶ್ರೀನಿಧಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಐಸ್ ಕ್ರೀಮ್ ಸಹಿತ ಹಲವು ಜ್ಯೂಸ್‌ಗಳು ಫುಡ್ ಫೆಸ್ಟ್‌ನಲ್ಲಿ ವಿಶೇಷವಾಗಿ ಗ್ರಾಹಕರಿಗೆ ಹೊಸ ಸವಿರುಚಿಯ ಉಣ ಬಡಿಸುತ್ತಿವೆ.
