





ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಶಿರೋಡಿಯನ್ ತರವಾಡು ಮನೆಯ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ನ. 18 ಮತ್ತು 19 ರಂದು ಜರಗಲಿದೆ.



ತಂತ್ರಿಗಳಾದ ಶಿವಪ್ರಸಾದ್ ಶಾಂತಿ ಸರಪಾಡಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳು ನೆರವೇರಲಿವೆ. ನ. 18 ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಧರ್ಮದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಟೆ, ಧೂಮಾವತಿ, ವರ್ಣರ ಪಂಜುರ್ಲಿ, ಕೊರತಿ ಮೈಯಂತಿ, ರಾಜನ್ ಪೀಠ ಪ್ರತಿಷ್ಟಾ ಕಾರ್ಯಕ್ರಮ ನಡೆಯಲಿದೆ. ನಂತರ ಪಾನಕ ಪೂಜೆ, ರಕ್ತೇಶ್ವರಿ ಗುಳಿಗ ತಂಬಿಲ ನಡೆಯಲಿದೆ. ಸಂಜೆ ರಾಹುಗುಳಿಗ ತಂಬಿಲ ನಡೆದು, ಕಲ್ಲಾಳ್ತಗುಳಿಗ ದೈವದ ಕೋಲ ಜರಗಲಿದೆ. ಬಳಿಕ ಮೈಸಂದಾಯ, ಧೂಮಾವತಿ ವರ್ಣರ ಪಂಜುರ್ಲಿ ಭಂಡರ ತೆಗೆದು ಮೈಸಂದಾಯ ನೇಮ, ಧೂಮಾವತಿ ದೈವದ ನೇಮ ಹಾಗೂ ವರ್ಣರ ಪಂಜುರ್ಲಿ ದೈವದ ನೇಮ ನಡೆಯಲಿದೆ.






ನ. 19 ರಂದು ಸಂಜೆ ಕೊರತಿ ಮತ್ತು ಮೈಯಂತಿ ದೈವದ ಕೋಲ ಜರಗಲಿದೆ. ಬಳಿಕ ಧರ್ಮದೈವ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವದ ಭಂಡಾರ ಇಳಿಸಿ ಅನ್ನಸಂತರ್ಪಣೆ ಜರಲಿದೆ. ರಾತ್ರಿ ಧರ್ಮದೈವ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ ಎಂದು ಶಿರೋಡಿಯನ್ ಕುಟುಂಬಸ್ಥರ ತರವಾಡು ಮನೆ ಪ್ರಕಟಣೆ ತಿಳಿಸಿದೆ.









