ಪುತ್ತೂರು: ವಿದ್ಯಾದೇವತೆಯಾದ ಸರಸ್ವತಿಯ ದೇವಿಯ ಅನುಗ್ರಹ ಪಡೆಯುವುದು ಪ್ರತಿಯೊಬ್ಬ ವಿದ್ಯಾದಾಹಿಯ ಆಶಯ. ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಸರಸ್ವತಿ ದೇವಿಯ ಸ್ತುತಿ, ಪೂಜೆ ವಾಡಿಕೆಯಾಗಿದೆ. ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಸೆ.27 ರಂದು ಸರಸ್ವತಿ ಪೂಜೆ ನಡೆಯಿತು.

ವಿದ್ಯಾರ್ಜನೆಗೆ ಮುನ್ನುಡಿಯಾಗಿ ಪುಟಾಣಿಗಳಾದ ಮಿಷಿತ, ಸನ್ನಿಧಿ ಭುಸಾರೆ, ಇಶಾನಿ ಪೈರವರಿಗೆ ಅಕ್ಷರಾಭ್ಯಾಸನ್ನು ಮಾಡಿಸಲಾಯಿತು. ಜೊತೆಗೆ ವಾಹನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ಮಕ್ಕಳ ಪೋಷಕರು, ಮಾತಾಜಿಯವರು ಉಪಸ್ಥಿತರಿದ್ದರು.