ಪ್ರಗತಿಸ್ಟಡಿ ಸೆಂಟರ್‌ನಲ್ಲಿ 19ನೇ ವರ್ಷದ ಶಾರದಾ ಪೂಜೆ ಆಚರಣೆ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿಸ್ಟಡಿ ಸೆಂಟರ್‌ನಲ್ಲಿ 19ನೇ ವರ್ಷದ ಶಾರದಾ ಪೂಜೆಯನ್ನು ಶಿವನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಸಲಾಯಿತು.

ಸೆ.29ರಂದು ಶಾರದೆಯ ಪ್ರತಿಷ್ಠಾಪನೆ ಮಾಡಿ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಭಜನೆಯ ಮೂಲಕ ಶಾರದೆಯನ್ನು ಆರಾಧಿಸಿದರು. ಸಂಸ್ಥೆಯಲ್ಲಿ 29,30,1 ರಂದು ವಿಶೇಷವಾಗಿ ಭಜನೆಯ ಮೂಲಕ ಶಾರದೆಯನ್ನು ಪೂಜಿಸುವುದು ಸುಮಾರು 19 ವರ್ಷದಿಂದ ಬಂದಿರುವ ಸಂಪ್ರದಾಯ ಹಾಗೂ ಇದೊಂದು ಪ್ರಗತಿಯ ವಿಶೇಷತೆ. ಕಾರ‍್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ ಪಿ.ವಿ , ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್‌ನಾಥ ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here