ರಾಮಕುಂಜ: ರಾಮಕುಂಜ ಗ್ರಾಮದ ಬಾಂತೊಟ್ಟು ನಿವಾಸಿ, ಕೆಎಸ್ ಆರ್ ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಹೊನ್ನಪ್ಪ ಗೌಡ (72ವ.) ಅವರು ಅನಾರೋಗ್ಯದಿಂದ ಅ.1ರಂದು ಬೆಳಿಗ್ಗೆ ಸ್ವ ಗೃಹದಲ್ಲಿ ನಿಧನರಾದರು.
ಇವರು ಕೆಎಸ್ಆರ್ ಟಿಸಿ ಯಲ್ಲಿ ಹಲವು ವರ್ಷ ನಿರ್ವಾಹಕರಾಗಿ, ಬಳಿಕ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತರಾದ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ರಾಮಕ್ಕ, ಪುತ್ರರಾದ ಲಕ್ಷ್ಮಣ ಗೌಡ, ಮಹೇಶ ಗೌಡ, ಸತೀಶ, ಪುತ್ರಿ ಪುಷ್ಪಲತಾ ಅವರನ್ನು ಅಗಲಿದ್ದಾರೆ.