ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಸರ್ವೆ ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಆಶ್ರಯದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಹರೀಶ್ ಆಚಾರ್ಯ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ ಆರ್ ಶಮ (584 ಅಂಕ), ಚಂದ್ರಶೇಖರ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ ಲಿಖಿತ ಎನ್ (584 ಅಂಕ), ಅಶೋಕ್ ನಾಯ್ಕ್ ಮತ್ತು ಸವಿತಾ ದಂಪತಿಗಳ ಪುತ್ರಿ ಆತ್ಮಿ (561 ಅಂಕ) ಹರೀಶ್ ವೈ ಮತ್ತು ಭವಾನಿ ದಂಪತಿಗಳ ಪುತ್ರಿ, ಸಂತ ಫಿಲೋಮಿನಾ ಕಾಲೇಜಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಶ್ರಾವ್ಯ ವೈ (576 ಅಂಕ) ವೆಂಕಪ್ಪ ನಾಯ್ಕ ಎಲಿಯ ಮತ್ತು ಉಮಾವತಿ ದಂಪತಿಗಳ ಪುತ್ರ, ಸುಳ್ಯ ಕೆವಿಜಿ ಕಾಲೇಜಿನ ಡಿಗ್ರಿ ವಿದ್ಯಾರ್ಥಿ ನಿಶಾಂತ್ ಎ ವಿ (82%) ಅಂಕ ಪಡೆದಿದ್ದು ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿದ ಮಾತೃಶ್ರೀ ಸೋಲಾರ್ ಸಿಸ್ಟಮ್‌ನ ಮಾಲಕ ರವಿ ಕುಮಾರ್ ಮಠ ಕೆದಂಬಾಡಿ ಅವರು ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ ನಾಯ್ಕ್ ನೆಕ್ಕಿಲು ವಹಿಸಿದರು. ಆರ್ ಶಮ, ಆತ್ಮಿ ಎನ್. ಶ್ರಾವ್ಯ ವೈ, ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಹರೀಶ್ ವೈ ಎಲಿಯ ಸ್ವಾಗತಿಸಿದರು. ದೀಕ್ಷಿತ್ ಪಂಡಿತ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿಯಾಗಿ ಚೇತನ್ ಕಲ್ಪನೆ ವಂದಿಸಿದರು. ಸುಂದರ ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here