ಕಾಣಿಯೂರು: ಚೆನ್ನಪ್ಪ ಗೌಡ ಬೈಲಂಗಡಿ ಇವರ 75 ನೇ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಇದರ ಮುಖ್ಯದ್ವಾರ, ಬೊಬ್ಬೆಕೇರಿ ಸಮೀಪ ತಂಗುದಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಅ 1ರಂದು ನೆರವೇರಿಸಲಾಯಿತು. ಚೆನ್ನಪ್ಪ ಗೌಡ ಬೈಲಂಗಡಿ ಇವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಇದರ ಆನುವಂಶಿಕ ಮೊಕ್ತೇಸರ ಹರಿಯಪ್ಪ ಗೌಡ ನಾವೂರು, ಆಡಳಿತ ಮಂಡಳಿ ಅಧ್ಯಕ್ಷ ಹರ್ಷಿತ್ ನಿಡ್ಡಾಜೆ, ಪ್ರಗತಿಪರ ಕೃಷಿಕ ಪ್ರದೀಪ್ ಬೊಬ್ಬೆಕ್ಕೇರಿ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಚಂದ್ರ ರೈ ಕುಮೇರು, ಸುನಂದಾ ಅಬ್ಬಡ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು ಇದರ ಅಧ್ಯಕ್ಷ ಅನಂತ ಕುಮಾರ್ ಬೈಲಂಗಡಿ ಮತ್ತು ಸದಸ್ಯರು, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಅಧ್ಯಕ್ಷರಾದ ಮಧುಕರ್ ಬೆಂಗಡ್ಕ, ಮತ್ತು ಸದಸ್ಯರು, ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮೋಹನ್ ದಾಸ್ ರೈ ಪಿಜಕ್ಕಳ ಮತ್ತು ಸದಸ್ಯರು, ಮನೆಯವರು, ಊರಿನ ಗಣ್ಯರು, ಬಂಧುಮಿತ್ರರು ಭಾಗವಹಿಸಿದರು. ರವಿಶಂಕರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.