ಬೆಥನಿ ಐಟಿಐ ನೆಲ್ಯಾಡಿ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭ

0

ಪುತ್ತೂರು: ತಾಂತ್ರಿಕ ತರಬೇತಿ ವ್ಯಕ್ತಿಯ ಭವಿಷ್ಯವನ್ನು ರೂಪಿಸುವುದರೊಂದಿಗೆ ರಾಷ್ಟ್ರಕ್ಕೂ ಶಕ್ತಿ ತುಂಬುವ ಕೆಲಸ ಮಾಡುತ್ತದೆ ಎಂದು ಸಂತ ಜಾರ್ಜ್ ಹೈ ಸ್ಕೂಲ್ ಕುಂತೂರು ಮುಖ್ಯಗುರು ಹರಿಶ್ವಂದ್ರ ಕೆ ಹೇಳಿದರು. ಬೆಥನಿ ಐಟಿಐ ನೆಲ್ಯಾಡಿ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

“ಐಟಿಐ ತರಬೇತಿ ಕೇವಲ ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗದೇ, ಕೌಶಲ್ಯ ಗಳಿಸುವ ಮೂಲಕ ಕೈಗಾರಿಕೆಗಳಲ್ಲಿ ಸಾಧನೆ ತರುವಂತಾಗಬೇಕು. ದೀಪವು ಜ್ಞಾನದ ಸಂಕೇತವಾದಂತೆ, ಸಂಸ್ಥೆಯ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತೀ ಮುಖ್ಯ” ಎಂದು ಅವರು ತಿಳಿಸಿದರು.

ಇನ್ನೋರ್ವ ಅತಿಥಿ ಹಾಗೂ ಸಂಸ್ಥೆಯ ಪೂರ್ವ ವಿದ್ಯಾರ್ಥಿ ವಿವೇಕಾನಂದ ಪಿ. ಮಾತನಾಡಿ, “ಜೀವನದಲ್ಲಿ ಶಿಸ್ತು ಮತ್ತು ನಾಯಕತ್ವವನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರತರಾದರೆ, ಸಾಧನೆಗಳು ಖಂಡಿತವಾಗಿಯೂ ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ OIC ರೆ.ಫಾ. ಡಾ. ವರ್ಗೀಸ್ ಕೈಪನಡ್ಕ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ರೆ.ಫಾ. ಜಾರ್ಜ್ ಸ್ಯಾಮುವೆಲ್ OIC ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರಾಂಶುಪಾಲರಾದ ಸಜಿ ಕೆ. ತೋಮಸ್ ನೂತನ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಪವನ್ ನೂತನ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮವನ್ನು ಕೋಪಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಆರಂಭಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ವಂದಿಸಿದರು. ಕಾರ್ಯಕ್ರಮವನ್ನು ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ನಿರೂಪಿಸಿದರು.

LEAVE A REPLY

Please enter your comment!
Please enter your name here