ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ ಕುದ್ರೋಳಿ ನವರಾತ್ರಿ ಮಹೋತ್ಸವದಲ್ಲಿ ಸ್ವಯಂ ಸೇವೆ

0

ಪುತ್ತೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ  ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಯುವವಾಹಿನಿ ಉಪ್ಪಿನಂಗಡಿ  ಘಟಕದ ವತಿಯಿಂದ ಸ್ವಯಂ ಸೇವೆ ನಡೆಯಿತು.

ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಇವರ ನೇತೃತ್ವದಲ್ಲಿ 110 ಮಂದಿ ಸದಸ್ಯರು ಬೆಳಿಗ್ಗೆಯಿಂದ  ಸಂಜೆ ತನಕ ಸೇವೆ ಸಲ್ಲಿಸಿದರು. ಸೇವೆಯಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್ ಎಂ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕಲ್ಲೇರಿ, ಅಜಿತ್ ಕುಮಾರ್ ಪಾಲೇರಿ, ಸೋಮಸುಂದರ ಕೊಡಿಪಾನ, ಚಂದ್ರಶೇಖರ ಸನಿಲ್, ಡಾ. ಆಶಿತ್ ಎಂ ವಿ, ಮನೋಹರ್ ಕುಮಾರ್ ಆಟಾಲ್, ರವೀಂದ್ರ ದಲ್ಕಾಜೆ, ಜನಾರ್ಧನ ನೂಜ, ಕುಶಾಲಪ್ಪ ಹತ್ತುಕಳಸೆ , ಕಾರ್ಯದರ್ಶಿ ಸುರೇಶ್ ವಿ, ಉಪಾಧ್ಯಕ್ಷರಾದ ಅಂಕಿತ್ ಎಂ ಜೆ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here