ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ತರವಾಡು ಮನೆಯ ಶ್ರೀ ನಾಗದೇವರು, ಧರ್ಮದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಮಹಾಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಹೋಮ ಮತ್ತು ಆಯುಧ ಪೂಜೆ ಶ್ರೀ ಬಾಲಕೃಷ್ಣ ಆಚಾರ್ಯ ಕಾರಿಂಜರವರ ನೇತೃತ್ವದಲ್ಲಿ ಅ.1ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯವಾಗಿ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾದನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ರಾಮಚಂದ್ರ ಭಟ್ ಮಳಿ, ಪ್ರಸಾದ ಭಟ್ ಕೊಚ್ಚಿ, ವೆಂಕಟಕೃಷ್ಣ ಭಟ್ ಮಳಿ, ಲೋಕೇಶ್ ಗೌಡ ಚಾಕೋಟೆ, ರವಿ ಮುಂಗ್ಲಿಮನೆ, ಬಾಲಕೃಷ್ಣ ಆಚಾರ್ ಕಾರಿಂಜ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಾಕೆ ಮಾಧವ ಗೌಡ, ಜಾಕೆ ಉಲ್ಲಾಸ್, ರವಿಶಂಕರ ಕಲ್ಲೂರಾಯ ಅಮ್ಚಿನಡ್ಕ, ಆರ್ಯಾಪು ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹರಿಣಾಕ್ಷಿ, ಆರ್ಯಾಪು ಗ್ರಾ.ಪಂ ಸದಸ್ಯೆ ಪೂರ್ಣಿಮಾ ರೈ, ಪವನ ಶೇಖರ ಕಾವು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರೀಶ್, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಪ್ರಸಾದ್, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಪುರೋಹಿತರಾದ ಪ್ರಭಾಕರ ಆಚಾರ್ ಕಾರಿಂಜ, ರಾಜಣ್ಣ ಆಚಾರ್ ಕಾರಿಂಜ, ಸುದ್ದಿ ಬಿಡುಗಡೆ ಪತ್ರಕರ್ತ ರಾಜೇಶ್ ಮಾಡಾವು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾದನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು ಮಾತನಾಡಿ, ಅಪಾರ ದೈವ ಭಕ್ತರಾಗಿರುವ ಶೇಷಪ್ಪ ಗೌಡರವರು ತನ್ನ ಸಂಪಾಧನೆ ಅಲ್ಪವಾದರೂ ದೈವ ದೇವರ ಸೇವೆಯಲ್ಲಿ ಬಹಳಷ್ಟು ನಿಷ್ಠೆ, ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸುತ್ತಿದ್ದಾರೆ. ಪ್ರತಿವರ್ಷ ದೇವರ ಸೇವೆ ನೆರವೇರಿಸುತ್ತಿರುವ ಮೂಲಕ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ದೇವರ ಸೇವೆಯ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ನ್ಯಾಯವಾದಿ ಗಿರೀಶ್ ಮಳಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ದಿವ್ಯನಾಥ ಶೆಟ್ಟಿ ಕಾವು ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯತು. ನೀರ್ಕಜೆ ತರವಾಡು ಮನೆಯ ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ತರವಾಡು ಮನೆಯ ಶೇಷಪ್ಪ ಗೌಡ, ಗಿರಿಜಾ, ಪುಷ್ಪಕರ ಮತ್ತು ಭರತ್ ಕುಮಾರ್‌ರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.