ಕುದ್ರೋಳಿ ಮಂಗಳೂರು ದಸರಾ ಉತ್ಸವದಲ್ಲಿ ಬೃಂದಾವನ ನಾಟ್ಯಲಯದ ವಿದ್ಯಾರ್ಥಿಗಳಿಂದ ನಾಟ್ಯಾಯಾನ

0

ಪುತ್ತೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಬೃಂದಾವನ ನಾಟ್ಯಾಲಯದ ಪುತ್ತೂರು ಮತ್ತು ಕುಂಬ್ರದ ವಿದ್ಯಾರ್ಥಿಗಳಿಂದ ‘ನಾಟ್ಯಾಯಾನ’ ಭರತನಾಟ್ಯ ಕಾರ್ಯಕ್ರಮ ಬುಧವಾರ ನಡೆಯಿತು.


ನೃತ್ಯ ಗುರು ವಿದುಷಿ ರಶ್ಮಿ ದಿಲೀಪ್ ರೈ ಯವರ ನಿರ್ದೇಶನದಲ್ಲಿ ನಾಟ್ಯಾಲಯದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ಯತೀಶ್ ಕುಡುಪು ಕಾರ್ಯಕ್ರಮವನ್ನು ನಿರೂಪಿಸಿದರು. ದೇವಸ್ಥಾನದ ದೇವಸ್ಥಾನ ಸಮಿತಿಯ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ದೇವರ ಪ್ರಸಾದ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here