ರಾಧಾ’ಸ್‌ನಲ್ಲಿ ಮತ್ತೆ ಬಂದಿದೆ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ

0

ಜವುಳಿ ಖರೀದಿಸಿ ಪ್ರತಿವಾರ ಭರ್ಜರಿ ಬಹುಮಾನ ಗೆಲ್ಲುವ ಸುವರ್ಣಾವಕಾಶ

ಪುತ್ತೂರು: ಪುತ್ತೂರಿನ ಜೊತೆಗೆ ಹತ್ತೂರಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಷ್ಠಿತ ಜವುಳಿ ಮಳಿಗೆ ರಾಧಾ’ಸ್ ತನ್ನ ಗ್ರಾಹಕರಿಗಾಗಿ ಮಗದೊಮ್ಮೆ ವಿನೂತನ ಆಫರ್‌ಗಳನ್ನು ನೀಡುತ್ತಿದೆ. ಜವುಳಿ ಖರೀದಿಗೆ ವಿಶೇಷ ಕೊಡುಗೆಗಳ ಸುರಿಮಳೆಯೊಂದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವವು ಅ.3ರಿಂದ ಪ್ರಾರಂಭಗೊಂಡಿದೆ.


ಕಳೆದ 30 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಮನೆ ಮಾತಮಾತಾಗಿರುವ ರಾಧಾ’ಸ್‌ನಲ್ಲಿ ಪ್ರತಿವರ್ಷ ಮಾನ್ಸೂನ್ ಮೇಳವನ್ನು ನಡೆಸುವ ಜೊತೆಗೆ ಗ್ರಾಹಕರಿಗೆ ಈ ಭಾರಿ ಮತ್ತೊಮ್ಮೆ ಆಫರ್‌ಗಳ ಬಿಗ್‌ಬಾಸ್ ರಾಧಾಸ್ ಉತ್ಸವದಲ್ಲಿ ಶಾಫ್ & ವಿನ್ ವಿಶೇಷ ಕೊಡುಗೆಗಳನ್ನು ನೀಡುತ್ತುದೆ. ಒಂದು ತಿಂಗಳ ಕಾಲ ನಡೆಯುವ ರಾಧಾ’ಸ್ ಉತ್ಸವದಲ್ಲಿ ಜವುಳಿ ಖರೀದಿಗೆ ವಿಶೇಷ ರಿಯಾಯಿತಿಯೊಂದಿಗೆ ರೂ.3,999ರ ಜವುಳಿ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದೆ. ಪ್ರತಿ ಶುಕ್ರವಾರ ಕೂಪನ್‌ಗಳ ಡ್ರಾ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆಗೆ ಆಕರ್ಷಕ ಬಹುಮಾನಗಳು ಸೇರಿದಂತೆ 10 ಬಹುಮಾನಗಳನ್ನು ನೀಡಲಾಗುತ್ತಿದೆ. ತಿಂಗಳಾಂತ್ಯಕ್ಕೆ ಬಂಪರ್ ಡ್ರಾ ನಡೆಯಲಿದೆ. ಬಂಪರ್ ಡ್ರಾ.ದಲ್ಲಿ ವಿಜೇತರಾದವರಿಗೆ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಈ ಕೊಡುಗೆಗಗಳ ಅ.3ರಿಂದ ಪ್ರಾರಂಭಗೊಂಡು ಅ.31ರ ತನಕ ದೊರೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.


ರಾಧಾ’ಸ್ ಉತ್ಸವದಲ್ಲಿ ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ರಾಧಾಸ್ ಮಳಿಗೆಯು ಕಲ್ಪಿಸಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಸಲು ಅವಕಾಶ ಕಲ್ಪಿಸಿದೆ.


ಪ್ರತಿ ದಿನ ಹೊಸ ಸಂಗ್ರಹ, ಕಡಿಮೆ ದರ:
ನೇರವಾಗಿ ಪ್ಯಾಕ್ಟರಿಯಿಂದ ಖರೀದಿಸಿದ ಉಡುಪುಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಗ್ರಹಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿನೂತನ ಶೈಲಿಯ, ಹೊಸ ಹೊಸ ವಿನ್ಯಾಸದ ಉಡುಪುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು, ಪುರುಷರ ಎಲ್ಲಾ ರೀತಿಯ ಉಡುಪುಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳ ಬೃಹತ್ ಸಂಗ್ರಹವಿದೆ. ಅನುಭವೀ ಸಿಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಸೀಮಿತ ದಿನಗಳ ತನಕ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here