ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಯಲ್ಲಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ” ಎಂಬ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಡಾ. ರಾಜಶೇಖರ ಹಳಿಮನಿ ಅವರು ಕುವೆಂಪು ಅವರ ಸಾಹಿತ್ಯ ದ ಪ್ರಸ್ತುತತೆಯನ್ನು ತಿಳಿಸಿ ಕುವೆಂಪು ಅವರ ಕವಿ ಮನೆ ದರ್ಶಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಶೇಷ ಉಪನ್ಯಾಸ ನೀಡಿದ ಡಾ. ರವಿಶಂಕರ ಅವರು ಇಂದಿನ ಇಕ್ಕಟ್ಟು, ಬಿಕ್ಕಟ್ಟುಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರವಿದೆ. ಅವರ ಸಾಹಿತ್ಯ ಪ್ರತಿಪಾದಿಸುವ ವಿಶ್ವ ಮಾನವೀಯತೆ ಇಂದಿನ ಅಗತ್ಯ. ಮತ ಮತ್ತು ಮತೀಯ ರಾಜಕಾರಣದ ಛಿದ್ರ ಶಕ್ತಿಗಳ ವಿರುದ್ಧ ವೈಚಾರಿಕ ಜಾಗೃತಿಯ ಅವಶ್ಯಕತೆಯನ್ನು ಅವರು ಪ್ರತಿಪಾದಿಸಿದರು. ಆದ್ದರಿಂದ ವಿದ್ಯಾರ್ಥಿಗಳು ಕುವೆಂಪುರವರ ಸಾಹಿತ್ಯ ಓದಬೇಕು ಎಂದು ಕರೆ ನೀಡಿದರು.

ಪ್ರಾಂಶುಪಾಲ ಪ್ರೊ. ದಾಮೋದರ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮಕ್ಕೆ ಡಾ ಸುಬ್ರಹ್ಮಣ್ಯ ಸ್ವಾಗತಿಸಿ ಗ್ರಂಥಪಾಲಕ ಶ್ರೀರಾಮ ಕೆ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆ ಯೊಂದಿಗೆ ಆರಂಭಗೊಂಡಿದ್ದ ಸಭಾ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಪದ್ಮಜ ನಿರೂಪಿಸಿದರು.