ಷಷ್ಠಿ ಮಹೋತ್ಸವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಯಶಸ್ವಿಯಾಗಿಸಿ-ಕೇಶವ ಪೂಜಾರಿ
ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೆಂಬರ್ 25, 26ರಂದು ನಡೆಯುವ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವದ ಪ್ರಯುಕ್ತ ಭಕ್ತರ ಪೂರ್ವಭಾವಿ ಸಭೆಯು ಅ.5 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರ ಅಧ್ಯಕ್ಷತೆಯಲ್ಲಿ ಜರಗಿತು.
ಪೂರ್ವಭಾವಿ ಸಭೆಯಲ್ಲಿ ಸ್ವಾಗತಿಸಿ, ಮಾತನಾಡಿದ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು, ಶ್ರೀ ಕ್ಷೇತ್ರದ ಭಕ್ತಾಧಿಗಳ ಸಹಕಾರದಿಂದ ದೇವಸ್ಥಾನದಲ್ಲಿ ನಡೆಯುವ ಜಾತ್ರೋತ್ಸವ ಹಾಗೂ ದಿನನಿತ್ಯದ ಪೂಜಾ ವಿಧಾನಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಸುಮಾರು ಹನ್ನೆರಡು ವರ್ಷದ ಹಿಂದೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಜರಗಿದ್ದು, ಐದು ವರುಷದ ಹಿಂದೆ ನಮ್ಮ ಸಮಿತಿ ಇದ್ದ ಸಂದರ್ಭದಲ್ಲಿ ಶ್ರೀ ಕ್ಷೇತ್ರವು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು ಇದನ್ನು ದೈವ-ದೇವರು ನಮ್ಮ ಕೈಯಲ್ಲಿ ಮಾಡಿಸಿರುತ್ತಾರೆ. ಕಳೆದ ಸಾಲಿನ ಸಮಿತಿಯಲ್ಲಿನ ಸುಮಾರು ರೂ.3 ಲಕ್ಷ ಸಾಲವನ್ನು ಮೊದಲಾಗಿ ಪಾವತಿಸುತ್ತಿದ್ದು ಬಳಿಕ ನಮ್ಮ ಅವಧಿಯ ಸಂದರ್ಭದಲ್ಲಿನ ಸುಮಾರು ಹನ್ನೆರಡು ಲಕ್ಷ ಸಾಲವನ್ನು ಮರು ಪಾವತಿಸುತ್ತಾ ಇದ್ದೇವೆ. ದೇವಸ್ಥಾನಕ್ಕೆ ಸುಮಾರು ರೂ.ಒಂದು ಲಕ್ಷ ವೆಚ್ಚದ ಧ್ವನಿವರ್ಧಕ ಸೆಟ್ ನ್ನು ಈಗಾಗಲೇ ದಾನಿಗಳ ಸಹಕಾರದಿಂದ ಖರೀದಿ ಮಾಡಿರುತ್ತೇವೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯರ ನಿರ್ದೇಶನದಂತೆ ನಡೆಯುವ ಷಷ್ಠಿ ಜಾತ್ರೋತ್ಸವವನ್ನು ಪ್ರತಿಯೋರ್ವರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದು ಹೇಳಿ ಷಷ್ಠಿ ಮಹೋತ್ಸವದ ಕುರಿತು ಮಾತನಾಡಿದರು.
ಷಷ್ಠಿ ಮಹೋತ್ಸವಕ್ಕೆ ದಾನಿಗಳಿಂದ ಭರಪೂರ ಕೊಡುಗೆ
ಈ ಸಂದರ್ಭದಲ್ಲಿ ಭಾಗವಹಿಸಿದ ಬೆಂಗಳೂರಿನ ಉದ್ಯಮಿಗಳಾದ ನಾಗೇಶ್ ರಾವ್ ಅತ್ತಾಳರವರು ಷಷ್ಠಿ ಮಹೋತ್ಸವಕ್ಕೆ ದೇವಸ್ಥಾನಕ್ಕೆ ಹೊರಗೆ ಹಾಗು ಒಳಗೆ ಮತ್ತು ನಾಗಬನಕ್ಕೆ ಬೇಕಾದ ಹೂವಿನ ಅಲಂಕಾರ, ದೇವರ ಪ್ರಭಾವಳಿ ಅಲಂಕಾರಕ್ಕೆ ಬೇಕಾದ ಹೂವನ್ನು ಗಣೇಶ್ ಗೌಡ ಕೆಮ್ಮಿಂಜೆ, ದೇವರ ಪಲ್ಲಕಿ ಹೂವಿನ ಅಲಂಕಾರವನ್ನು ಉದಯ ತಂತ್ರಿರವರು ಮಾಡಿಸುವುದಾಗಿ ತಿಳಿಸಿರುತ್ತಾರೆ. ಅನ್ನದಾನಕ್ಕೆ ಸಭೆಯಲ್ಲೇ ಪದ್ಮನಾಭ ಪೂಜಾರಿ ಬೆದ್ರಾಳ, ಲೋಕೇಶ್ ಗೌಡ(ಸ್ಕಂದ ಪ್ರಿಂಟರ್ಸ್), ಉಮೇಶ್ ಕೆಮ್ಮಿಂಜೆ, ಕೊರಗಪ್ಪ ಪೂಜಾರಿ ಕೊರಂಗು, ಕೇಶವ ಪೂಜಾರಿ ಬೆದ್ರಾಳ(ಅಧ್ಯಕ್ಷರು), ಸೂರಪ್ಪ ಗೌಡ, ಕೃಷ್ಣಪ್ಪ ಪೂಜಾರಿ ಕೂಡಮರ, ರಕ್ಷಿತ್ ನಾಯ್ಕ, ಚಂದ್ರಶೇಖರ ಕಲ್ಲಗುಡ್ಡೆ, ವಸಂತ್ ನಾಯ್ಕ್, ರೇಖಾ ಯಶೋಧರ ಗೌಡ, ಮಹೇಶ್ ಕಾವೇರಿಕಟ್ಟೆ( ಸಮಿತಿ ಸದಸ್ಯರು ) ಈಗಾಗಲೇ ತಲಾ 5000 ಕೊಡುವುದಾಗಿ ತಿಳಿರುತ್ತಾರೆ. ಅಂತೆಯೇ ಇನ್ನು ಹೆಚ್ಚಿನ ದಾನಿಗಳ ಸಹಕಾರ ಅಗತ್ಯ ಇದೆ ಎಂದು ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ವಿನಂತಿಸಿರುತ್ತಾರೆ.
ಈ ಸಂದರ್ಭದಲ್ಲಿ ಷಷ್ಠಿ ಮಹೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ರಚಿಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಕುಮಾರ್ ನಾಯ್ಕ, ಮಹೇಶ್ ಬಿ, ರೇಖಾ ಯಶೋಧರ ಗೌಡ ಬಿ.ಎಸ್ , ಸೂರಪ್ಪ ಗೌಡ, ಚಂದ್ರಶೇಖರ ಕಲ್ಲಗುಡ್ಡೆ, ರಕ್ಷಿತ್ ನಾಯ್ಕ್, ಗುಮಾಸ್ತ ಭರತ್, ರಘುನಾಥ್ ಪೂಜಾರಿ, ಡಾ.ಪಿ.ಕೆ.ಎಸ್ ಭಟ್, ಲೋಕೇಶ್ ಗೌಡ, ಸತೀಶ್ ಗೌಡ, ಶೇಖರ್ ಗೌಡ, ಯೋಗೀಶ್ ದೇವಾಡಿಗ, ರಾಜೇಶ್ ಗೌಡ, ರುಕ್ಮಯ ಗೌಡ, ಗುರುಪ್ರಸಾದ್, ಗಣೇಶ ನೈತ್ತಾಡಿ, ಸೂರ್ಯಕುಮಾರ್, ಶಶಿರಾಜ್, ಚಿತ್ತರಂಜನ್, ಶ್ರವಣ್ ಅತ್ತಾಳ, ಧೀರಜ್ ಕೆಮ್ಮಿಂಜೆ, ಎಂ ರಾಧಾಕಿರಣ್, ಕೊರಗಪ್ಪ ಪೂಜಾರಿ ಕೊರಂಗು , ಶಿವಪ್ರಸಾದ್, ಕೆ.ದಯಾನಂದ, ಅವಿನಾಶ್ ಕೆ, ರಿತನ್, ಧನುಷ್ ಕೆ, ಲಿಖಿತ್ ಕೆ, ಅಕ್ಷಯ್ ಕೆ, ಪುನೀತ್, ಕೃಷ್ಣಪ್ಪ ಪೂಜಾರಿ ಕೂಡಮರ , ಪದ್ಮನಾಭ ಪೂಜಾರಿ ಕೂಡಮರ , ಉಮೇಶ್ ಗೌಡ, ಯು.ನಾರಾಯಣ ಗೌಡ, ಯಶಸ್ ಕೆ ಸಹಿತ ಹಲವರು ಭಕ್ತಾಧಿಗಳು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೂರಪ್ಪ ಗೌಡ ವಂದಿಸಿದರು.
ಹಸಿರು ಕಾಣಿಕೆ ಮೆರವಣಿಗೆ/ಆಮಂತ್ರಣ ಪತ್ರಿಕೆ ವಿತರಣೆ
ಷಷ್ಠಿ ಮಹೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಜರಗಲಿದ್ದು, ಸೋಮವಾರದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾವಿಧಿಗಳು ನಡೆದ ಬಳಿಕ ಕೆಮ್ಮಿಂಜೆ ದೇವಸ್ಥಾನಕ್ಕೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತರಲಾಗುವುದು. ಹೊರೆಕಾಣಿಕೆ ನೀಡ ಬಯಸುವವರು ಹಸಿರು ಕಾಣಿಕೆಯೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸೇರುವುದು ಜೊತೆಗೆ ಇತರ ವಾಹನಗಳು ಸೇರುವುದು. ಶ್ರೀ ಕ್ಷೇತ್ರದ ಷಷ್ಠಿ ಮಹೋತ್ಸವದ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರದಲ್ಲಿ ಹಾಗೂ ಇತರೆಡೆ ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಸಹಕರಿಸಬೇಕು ಎಂದು ಶ್ರೀ ಕ್ಷೇತ್ರದ ಅಧ್ಯಕ್ಷ ಕೇಶವ ಪೂಜಾರಿಯವರು ಹೇಳಿದರು.