ಬಜತ್ತೂರು; ತುಳುನಾಡ ತುಡರ್ ವಾಟ್ಸಪ್ ಗ್ರೂಪ್‌ನಿಂದ ರಕ್ತದಾನ ಶಿಬಿರ

0

ನೆಲ್ಯಾಡಿ: ತುಳುನಾಡ ತುಡರ್ ವಾಟ್ಸಪ್ ಗ್ರೂಪ್ ಇದರ ವತಿಯಿಂದ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಅ.5ರಂದು ಬಜತ್ತೂರು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಮಣಿಪಾಲ ದಂತ ವಿಜ್ಞಾನಗಳ ಕಾಲೇಜು ಆರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರು, ಪ್ರೋಫೆಸರ್ ಆಗಿರುವ ಡಾ.ಆಶಿತ್ ಎಂ.ವಿ. ಅವರು ಮಾತನಾಡಿ ರಕ್ತದಾನದ ಮಹತ್ವ ಹಾಗೂ ರಕ್ತದಾನದ ಕೊರತೆ ಆದಾಗ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಬ್ಲಡ್ ಬ್ಯಾಂಕ್ ಇನ್‌ಚಾರ್ಜ್ ಆಂಟನಿ ಮಾತನಾಡಿ, ರಕ್ತದಾನ ಮಾಡುವುದರಿಂದ ಆಗುವ ಉಪಯೋಗದ ಬಗ್ಗೆ ತಿಳಿಸಿದರು.


ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆ ವೈದ್ಯ ಡಾ.ನಿರಂಜನ್ ರೈ, ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಗಂಗಾಧರ ಪಿ.ಎನ್., ಡಾ| ಕೆಂಚಾವ್, ತುಳುನಾಡ ತುಡರ್ ವಾಟ್ಸಪ್ ಗ್ರೂಪ್ ಅಧ್ಯಕ್ಷ ಮನೋಜ್‌ಕುಮಾರ್ ಮಣಿಕ್ಕಳ ಉಪಸ್ಥಿತರಿದ್ದರು.


ಇತ್ತೀಚೆಗೆ ನಿಧನರಾದ ಗ್ರೂಪ್‌ನ ಸದಸ್ಯ ಪ್ರಶಾಂತ್ ಸಾಲಿಯನ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ೧ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸುಜಾತ ರೆಂಜಾಳ ಸ್ವಾಗತಿಸಿದರು. ಮಮತಾ ಆಲಜೆ ವಂದಿಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಗ್ರೂಪ್‌ನ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ವಿವಿಧ ಸಂಘಟನೆಗಳ ಪ್ರಮುಖರು, ಸದಸ್ಯರು, ದಾನಿಗಳು ರಕ್ತದಾನ ಮಾಡಿದರು.

LEAVE A REPLY

Please enter your comment!
Please enter your name here