ಪುತ್ತೂರು: ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ (ICAR) ವತಿಯಿಂದ ನವದೆಹಲಿಯಲ್ಲಿ ಸೆ.29ರಂದು ನಡೆದ ರಾಷ್ಟ್ರಮಟ್ಟದ ಕೃಷಿ ವಿಚಾರ ಸಂಕಿರಣದಲ್ಲಿ ಸಮಗ್ರ ಕೃಷಿಯ-ಗೇರು ಬೆಳೆಯ ಬಗ್ಗೆ ಗೇರು ಮತ್ತು ಸಮಗ್ರ ಕೃಷಿಕ ಕಡಮಜಲು ಸುಭಾಸ್ ರೈಯವರು ಸ್ವಾನುಭವದ ವಿಚಾರ ಮಂಡನೆ ಮಾಡಿದರು.
ಗೇರು ಬೆಳೆಯ ವೈಜ್ಞಾನಿಕ ಪದ್ದತಿಗಳ ಬಗ್ಗೆ ಘನ ಸಾಂದ್ರತೆ ಪದ್ದತಿಯ ಪ್ರಯೋಗಾತ್ಮಕ ಸಾಧಕ-ಬಾಧಕಗಳ ಬಗ್ಗೆ ಸವಿವರವಾದ ವಿಚಾರವನ್ನು ಪಿಪಿಟಿ ಮೂಲಕ ಮಂಡಿಸಿದರು. ಘನಸಾಂದ್ರ ಪದ್ಧತಿಯಲ್ಲಿ ಭಾರತಾದ್ಯಂತ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವಂತೆ ಐಸಿಎಆರ್ ಫ್ರುಟ್ಸ್ & ಪ್ಲಾಂಟೇಶನ್ಸ್‌ನ ಕ್ರಾಪ್ ಎಡಿಜಿ ಡಾ| ವಿ.ಬಿ. ಪಟೇಲ್ ರವರು ಡಿಸಿಸಿಡಿ ಕೊಚ್ಚಿ ಕೇರಳ ಇದರ ನಿರ್ದೇಶಕಿ ಡಾ| ಫೆಮಿನಾ ಇವರಿಗೆ ನಿರ್ದೇಶಿಸಿದರು. ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ- ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ವಿಶೇಷವಾಗಿ ಘನಸಾಂದ್ರ (3*3) ಪದ್ದತಿಗೆ ವಿಆರ್‌ಐ 3 ಎಂಬ ತಳಿ ಸೂಕ್ತವಾಗಿದೆ. ಗೆಲ್ಲು ಸವರುವುದಕ್ಕೆ (ಪ್ರೂನಿಂಗ್) ಮತ್ತು ಅತ್ಯಧಿಕ ಫಸಲು ನೀಡಲು ವಿಆರ್‌ಐ 3 ಭಾರತದ ಎಲ್ಲಾ ಪ್ರದೇಶಗಳಲ್ಲಿ ಬೆಳೆಸಲು ಸೂಕ್ತವಾದ ತಿಳಿಯಾಗಿರುತ್ತದೆ.ಭಾಸ್ಕರ್ ಉಳ್ಳಾಲ 3 ಮೊದಲಾದ ತಳಿಗಳನ್ನು ಸಾಂದ್ರ ಪದ್ದತಿಯಲ್ಲಿ ಬೆಳೆಸಿ ಘನಸಾಂದ್ರ ಪದ್ದತಿ ಮತ್ತು ಸಾಂದ್ರ ಪದ್ದತಿಯಲ್ಲಿ ಬೆಳೇಸಲಾದ ಗೇರು ತೋಟದಲ್ಲಿ ಗಿಡ ಬಿಟ್ಟು ಗಿಡ ಒಂದು ಗಿಡವನ್ನು 6 ಅಥವಾ 8 ವರ್ಷದಲ್ಲಿ ತೆಗೆದು ಗಾಳಿ ಬೆಳಕಿಗೆ ಅವಕಾಶ ಮಾಡಿಕೊಡಬೇಕು. ಪರಿಪೂರ್ಣ ನಿರ್ವಹಣೆಯ ಮೂಲಕ ಗೇರು ಬೆಳೆಯ ಮೂಲಕ ಅಧಿಕ ಉತ್ಪಾದನೆಯನ್ನು ಪಡೆಯಬಹದುʼ ಎಂದು ಹೇಳಿದರು.
ವಿಚಾರ ಸಂಕಿರಣವನ್ನು ಐಸಿಎಆರ್‌ನ ಡಿಡಿಜಿ ಡಾ| ಎಸ್.ಕೆ. ಸಿಂಗ್ ಉದ್ಘಾಟಿಸಿದರು. ಜೆಎಸ್ ಎಂಒಎಫ್‌ಡಬ್ಲ್ಯುನ ಪ್ರಿಯಾರಂಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಸಿಎಆರ್ ಡಿಸಿಆರ್ ನಿರ್ದೇಶನ ಡಾ. ದಿನಕರ್ ಅಡಿಗ, ಆಹಾರ ಕೈಗಾರಿಕಾ ಸಚಿವಾಲಯದ ನಿರ್ದೇಶಕ ಸಂದೀಪ್ ಕೋಟೆ, ಎಪಿಇಡಿಎಯ ನಿರ್ದೇಶಕ ತರುಣ್ ಬಜಾಜ್, ಗೇರು ಬೆಳೆಗಾ ರಾಮ್‌ಕುಮಾರ ರಾಜರತ್ನಂ, ಗೇರು ಬೆಳೆಗಾರ ಮತ್ತು ಸಂಸ್ಕರಣೆ ಮಾಹಿತಿದಾರ ವಿಶ್ವಕೇಶವ ಕಾಸರಗೋಡು, ಡಿಸಿಆರ್ ಪ್ರಧಾನ ವಿಜ್ಞಾನಿಗಳಾದ ಡಾ| ಮೋಹನ್ ಜಿ.ಎಸ್., ಡಾ| ರವಿಪ್ರಸಾದ್ ಟಿ.ಎನ್., ವಿಜ್ಞಾನಿಗಳಾದ ಮಂಜುನಾಥ್ ಕೆ., ಡಾ| ಬಾಲಸುಬ್ರಹ್ಮಣ್ಯನ್ ಡಿ., ಜ್ಯೋತಿ ನಿಶಾದ್ ಪಾಲ್ಗೊಂಡರು. ವಿಜ್ಞಾನಿ ಅಶ್ವತಿ ವಂದಿಸಿದರು. ಇದೇ ವೇಳೆ ಕಡಮಜಲು ಸುಭಾಸ್ ರೈಯವರು ತಾನು ಬರೆದಿರುವ ʻಗೇರು ಎತ್ತರಕ್ಕೆ ಏರುʼ ಕೃತಿಯನ್ನು ಐಸಿಎಆರ್‌ನ ಗ್ರಂಥಾಲಯಕ್ಕೆ ನೀಡಿದರು.