ವಾರ್ಷಿಕೋತ್ಸವ ಪ್ರಯುಕ್ತ ವಿಸ್ತೃತ ಮಳಿಗೆ ಉದ್ಘಾಟನೆ…
ಸಂಭ್ರಮ ಸಲುವಾಗಿ ಬ್ರ್ಯಾಂಡೆಡ್ ಟೈಲ್ , ಸ್ಯಾನಿಟರಿ ಉತ್ಪನ್ನಗಳ ಖರೀದಿಗೆ ವಿಶೇಷ ರಿಯಾಯಿತಿ…
ಪುತ್ತೂರು : ಕಳೆದ ವರ್ಷ ಶುಭಾರಂಭಗೊಂಡು ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಐಕಾನಿಕ್ ಟೈಲ್ ಗ್ಯಾಲರಿಯು ಅಭಿವೃದ್ಧಿಯ ಅಂಗವಾಗಿ ಇನ್ನೊಂದು ವಿಸ್ತಾರವಾದ ಅಂತಸ್ತಿನಲ್ಲೂ ತನ್ನ ಬ್ರ್ಯಾಂಡೆಡ್ ಉತ್ಪನ್ನಗಳನ್ನು ಪ್ರದರ್ಶಿಸಿ ಮತ್ತಷ್ಟೂ ವಿಶಾಲಗೊಂಡು , ಗ್ರಾಹಕ ಜನತೆಯ ಸೇವೆಗೆ ತೆರೆದುಕೊಂಡಿದೆ. ಮನುಷ್ಯ ದುಡಿಯುವುದು ಆಸನ , ಆರಿವೆ ಮತ್ತು ಆಸರೆಗಾಗಿ. ಪ್ರತಿಯೊಬ್ಬರಿಗೂ ಸುಂದರ ಮನೆಯೊಂದನ್ನು ಕಟ್ಟಬೇಕೆಂಬ ಹಂಬಲ , ಆಸೆಯಿದ್ದೇ ಇರುತ್ತದೆ. ಅಂತಹ ಮನೆ ನಿರ್ಮಾಣಕ್ಕೆ ಬೇಕಾಗುವಂತಹ ಗುಣಮಟ್ಟದ ಸಾಮಾಗ್ರಿಗಳು ಇಲ್ಲಿ ಸಿದ್ಧವಿದೆಯೆಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅ. 6 ರಂದು ಇಲ್ಲಿನ ಕೇಪುಳು ಶ್ರೀ ಗುರು ಆರ್ಕೇಡ್ ನಲ್ಲಿ ವ್ಯವಹರಿಸುತ್ತಿರುವ ಬ್ರ್ಯಾಂಡೆಡ್ ಟೈಲ್ಸ್ , ಸ್ಯಾನಿಟರಿ ಸಾಮಾಗ್ರಿಗಳ ಮಳಿಗೆ ಐಕಾನಿಕ್ ಟೈಲ್ ಗ್ಯಾಲರಿ ಇದರ ವಾರ್ಷಿಕೋತ್ಸವ ಹಾಗೂ ವಿಸ್ತೃತ ಅಂತಸ್ತಿನ ಸಾಫ್ಟ್ ಲಾಂಚ್ ನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ನೆರವೇರಿಸಿ , ಆಶೀರ್ವಚನ ನೀಡಿದ ಅವರು , ಎಲ್ಲೆಡೆಯೂ ಈ ಸಂಸ್ಥೆ ಸದಾ ಜನಮನ್ನಣೆ ಗಳಿಸಿಕೊಂಡು , ಇನ್ನಷ್ಟೂ ಅಭಿವೃದ್ಧಿ ಹೊಂದಿ, ಮತ್ತಷ್ಟೂ ಉದ್ಯಮವನ್ನು ತೆರೆಯುಂತೆ ಆಡಳಿತ ಮಂಡಳಿಯನ್ನು ಅದರಲ್ಲೂ ವಿಶೇಷವಾಗಿ ಆಡಳಿತ ನಿರ್ದೇಶಕಿ ಪ್ರೇಮಲತಾ ಅವರನ್ನು ಅಭಿನಂದಿಸುವೆಯೆಂದು ಹೇಳಿ ಹಾರೈಸಿದರು.
ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮಾತನಾಡಿ , ಪ್ರತಿಯೊಬ್ಬರಲ್ಲೂ ಹೊಸತನ ಕಂಡುಕೊಳ್ಳಬೇಕೆಂಬ ಆಸೆಯಿರುವುದು ಸಹಜ. ಈಗಿನ ಕಾಲಘಟ್ಟದಲ್ಲಿ ಅತ್ಯಂತ ವಿಶೇಷ ಮತ್ತು ವೇಗವಾಗಿ ಮನೆ ನಿರ್ಮಾಣ ಕಾರ್ಯದಲ್ಲೂ ಬದಲಾವಣೆಯಾಗುತ್ತಿವೆ. ಪೀಠೋಪಕರಣಗಳು , ನೆಲಹಾಸು ಸಾಮಾಗ್ರಿಗಳು ಕೂಡ ಆಕರ್ಷಣೆ ಹೊಂದಿರಬೇಕು ಎನ್ನುವ ಕಲ್ಪನೆಯನ್ನು ಹೊಂದಿರುವಂತಹ ಜನತೆಗೆ ಅವರವರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳ ಪೂರೈಕೆಯು ಕೂಡ ಪೂರೈಕೆದಾರರಿಗೆ ಸವಾಲೆನಿಸಿದೆಯೆಂದು ಹೇಳಿದರು.
ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ , ಪರಿಶ್ರಮ , ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎಲ್ಲಿ ಇರುವುದೋ ಅಲ್ಲಿ ದೇವರು ನೆಲೆಸಿರುತ್ತಾರೆಯೆಂಬುವುದಕ್ಕೆ ಈ ಸ್ಥಳವೇ ಸಾಕ್ಷಿ. ಒಬ್ಬಾಕೆ ತಾಯಿ ಉದ್ಯಮ ಆರಂಭಿಸಿ ,ಒಳ್ಳೆಯತನದಿಂದಲೇ ಗ್ರಾಹಕ ವರ್ಗವನ್ನು ಸೆಳೆದಿದ್ದಾರೆಯೆಂದರೆ ಅವರಲ್ಲೊಂದು ವಿಶೇಷ ಶಕ್ತಿಯಿದೆ. ಅಂತಹ ಶಕ್ತಿಯಿಂದ ಸಂಸ್ಥೆ ಮತ್ತಷ್ಟೂ ಬೆಳಗಲಿಯೆಂದರು.
ಬನ್ನೂರು ಸಂತ ಆಂತೋನಿ ದೇವಾಲಯದ ಧರ್ಮ ಗುರು ಬಲ್ತ್ಝಾರ್ ಪಿಂಟೋ ಅವರು ಮಾತನಾಡಿ , ಬನ್ನೂರು ಚರ್ಚ್ ಇದರ ನವೀಕರಣ ಸಂಧರ್ಭದಲ್ಲಿ ನಾನೂ ಕೂಡ ಇದೇ ಸಂಸ್ಥೆಯಿಂದ ಟೈಲ್ಸ್ ಖರೀದಿ ಮಾಡಿದ್ದು , ತುಂಬಾ ಚೆನ್ನಾಗಿವೆ ಮತ್ತು ಅಂಟಿಸುವಂಥಹ ಕೆಲಸವನ್ನು ಕೂಡ ಸಿಬಂದಿಗಳು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾರೆ. ಯಾವುದೇ ಕುಟುಂಬ ಇಲ್ಲವೇ ದೇಶದ ಅಭಿವೃದ್ಧಿ ಗೆ ಹಲವು ಅಗತ್ಯಗಳಿದ್ದು ,ಮೊದಲಾಗಿ ಶಿಕ್ಷಣ , ಬಳಿಕ ರಸ್ತೆ , ನಂತರ ಉದ್ಯಮ ಇವೆಲ್ಲದರಿಂದ ಒಂದು ಕುಟುಂಬ ಬೆಳಗಲು ಸಾಧ್ಯವೆಂದು ಹೇಳಿದ ಅವರು , ಐಕಾನಿಕ್ ಸಂಸ್ಥೆ ಅಂತಹ ಕಾರ್ಯವನ್ನು ಮಾಡುತ್ತಿದೆಯೆಂದು ತಿಳಿಸಿದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಇವರುಗಳು ಕೂಡ ಹಾರೈಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆಯರಾದ ಪ್ರವೀಣ ಪ್ರಶಾಂತ್ ರೈ ಮರ್ವಂಜ ಮತ್ತು ಸೌಮ್ಯ ,ಮುಖ್ಯ ನಗರಸಭಾ ಆಯುಕ್ತೆ ವಿದ್ಯಾ ಎಸ್ ಕಾಳೆ ಹಾಗೂ ಸುಬ್ರಹ್ಮಣ್ಯ ಮಹಮಾಯ ರೆಸಿಡೆನ್ಸಿಯ ಎಂ ಶಿವ ಕುಮಾರ್ ಕಾಮತ್ ಮತ್ತು ನಮಿತಾ ವೇದಿಕೆಯಲ್ಲಿ ಹಾಜರಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕಿ ಪ್ರೇಮಲತಾ ಎಂ ಅತಿಥಿಗಳನ್ನು ಗೌರವಿಸಿ , ವಂದಿಸಿ ಬಳಿಕ ಮಾತನಾಡಿ , ಮಳಿಗೆಯಲ್ಲಿ ಬ್ಯಾಂಡೆಡ್ ಐಷರಾಮಿ ಟೈಲ್, ಸ್ಯಾನಿಟರಿ ಸಾಮಾಗ್ರಿಗಳನ್ನು ಪ್ರಮುಖ ಉತ್ಪಾದಕ ಸಂಸ್ಥೆಗಳಾದ ಕಜಾರಿಯಾ, ರ್ಯಾಕ್, ಹಿಂದ್ವೇರ್, ಸೇರಾ , ಸೋಮಾನಿ, ವಿಟೇರೋ, ಜಾನ್ಸ್ಸನ್ ಹಾಗೂ ಇತರ ಟೈಲ್ಸ್ ಉತ್ಪಾದಕರಿಂದ ನೇರ ಖರೀದಿ ಮೂಲಕ ಗ್ರಾಹಕರಿಗೆ ನೀಡುತ್ತಿದ್ದೇವೆ.
ಬಾತ್ ರೂಂ, ಮಾಡ್ಯೂಲರ್ ಕಿಚನ್ ಫಿಟ್ಟಿಂಗ್ಸ್ , ಇಂಟೀರಿಯರ್ ಸಾಮಾಗ್ರಿಗಳೆಲ್ಲಾ ಅತ್ಯುತ್ತಮ ದರದಲ್ಲಿ ಲಭ್ಯವಿದೆಯೆಂದು ಹೇಳಿ , ಸಹಕಾರ ಕೋರಿದರು. ಲಾವಣ್ಯ ,ಹರ್ಷಿತ್ ,ಗಿರೀಶ್ ,ರೇಣುಕುಮಾರ್ , ರಮ್ಯಾ , ಸ್ವಾಗತಿಸಿದರು. ಸಾರಿಕಾ ಪ್ರಾರ್ಥನೆ ನೆರವೇರಿಸಿ , ಪ್ರಜ್ಣಾ ಒಡಿಲ್ನಾಳ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ಸುರೇಶ್ ನೆಲ್ಲಿಕುಂಜೆ ಮಾತನಾಡಿ , ಐಕಾನಿಕ್ ಗ್ಯಾಲರಿಯು ಎರಡನೆಯ ಅಂತಸ್ತಿಗೂ ಹಬ್ಬಿರುವುದಕ್ಕೆ ಮೂಲ ಕಾರಣ ನಮ್ಮ ಪ್ರೀತಿಯ ಗ್ರಾಹಕ ಜನತೆ ಮತ್ತು ಊರಿನ ಜನರ ಸಂಪೂರ್ಣ ಬೆಂಬಲ. ಐಕಾನಿಕ್ ಅಂದರೇ ಸಂಪ್ರದಾಯವೆಂಬ ಅರ್ಥವಿದೆ. ಅಂದರೇ ನಾವೆಂದಿಗೂ ಈ ಪುಣ್ಯಮಣ್ಣಿನ ಸಂಪ್ರದಾಯವನ್ನೆಂದಿಗೂ ಬಿಟ್ಟು ಬಿಡುವುದಿಲ್ಲ ಜೊತೆಗೆ ದೇವರ ಅನುಗ್ರಹವು ಇದೆ ಮತ್ತೆ ಗ್ರಾಹಕರ ಆಶೀರ್ವಾದದಿಂದ ಮುಂದೆ ಸಾಗಿದ್ದೇವೆ. ನಿಮ್ಮೆಲ್ಲರ ಈ ಬಗೆಯ ಬೆಂಬಲ , ಪ್ರೋತ್ಸಾಹ ಸದಾ ಇರಲಿಯೆಂದು ಹೇಳಿ , ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಫ್ಯಾಕ್ಟರಿಯಿಂದಲೇ ನೇರ ಖರೀದಿ ಹಾಗೂ ವಿಶೇಷ ರಿಯಾಯಿತಿ…!!!
ಕಳೆದ ಕೆಲ ವರ್ಷಗಳಿಂದ ಟೈಲ್ಸ್ ವ್ಯವಹಾರವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬಂದಿರುವಂತ ಐಕಾನಿಕ್ ಸೆರಾಮಿಕ್ ಸಂಸ್ಥೆ ಎಲ್ಲಾ ವರ್ಗದ ಜನರ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದು, ಅತ್ಯುತ್ತಮ ರೀತಿಯ ಸೇವೆಯನ್ನು ನೀಡುವಲ್ಲಿ ಸೈ ಎನಿಸಿಕೊಂಡಿದೆ.
ಹೆಸರಾಂತ ಕಂಪನಿಯ ಟೈಲ್ಸ್ ಗಳೆಲ್ಲಾವನ್ನು ಸಂಸ್ಥೆಯು ಉತ್ಪಾದಕರಿಂದಲೇ ನೇರ ಖರೀದಿ ಮೂಲಕ ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಒದಗಿಸುವ ಕಾಯಕವನ್ನು ನಿಷ್ಠೆಯಿಂದ ಮಾಡಿದೆ ಜೊತೆಗೆ ಪ್ರತಿಯೊಂದು ಖರೀದಿಗೂ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದ್ದು , ಗ್ರಾಹಕರಿಗೆ ಎಲ್ಲಾ ಬಗೆಯ ಉತ್ಪನ್ನಗಳು ಉತ್ತಮ ದರದಲ್ಲೇ ಸಿಗಲಿವೆ…
ಪ್ರೇಮಲತಾ ಎಂ ,
ಆಡಳಿತ ನಿರ್ದೇಶಕಿ.